info@arivu.org
+91 94822-77872
ಕನ್ನಡ  English 

ಅರಿವು ಶಾಲೆ

‘ಅರಿವು’ ಮೈಸೂರಿನಲ್ಲಿರುವ ಒಂದು ಪರಿಸರ ಸ್ನೇಹಿ, ಪ್ರಾಥಮಿಕ ಶಾಲೆ. ಅರಿವು ಶಾಲೆಯಲ್ಲಿ ಶಿಕ್ಷಣ, ಚಟುವಟಿಕೆ ಮತ್ತು ಸಹಕಾರ ಆಧಾರಿತವಾಗಿದ್ದು, ದಿನ ನಿತ್ಯದ ಜೀವನಕ್ಕೆ ಪ್ರಸ್ತುತವಾಗಿರುತ್ತದೆ.

ಮಕ್ಕಳಿಗೆ ಕಲಿಕೆಯು ಒಂದು ಹರ್ಷದಾಯಕ ಅನುಭವವಾಗುವಂತೆ ಮಾಡುವುದೇ ಅರಿವು ಶಾಲೆಯ ಉದ್ದೇಶ. ಚಾರಣಗಳು, ನಕ್ಷತ್ರ ವೀಕ್ಷಣೆ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸುವುದರ ಮೂಲಕ ದೊಡ್ಡವರಿಗೂ ಕಲಿಯಲು ಒಂದು ವೇದಿಕೆಯನ್ನು ಕಲ್ಪಿಸುವುದು ಅರಿವು ಟ್ರಸ್ಟಿನ ಉದ್ದೇಶ. ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರಕೃತಿ ಸಂಪನ್ಮೂಲ ಕೇಂದ್ರ, ಸಮುದಾಯ ಜೀವನ, ಅರಿವು ಪ್ರಕಾಶನ ಇತ್ಯಾದಿಗಳ ಮೂಲಕ ‘ಅರಿವು’ ಮಾನವನ ಸಮಗ್ರ ಬೆಳವಣಿಗೆಯನ್ನು ಸಾಧಿಸಲು ಶ್ರಮಿಸುತ್ತದೆ.

ತಬಲಾ, ಶಾಸ್ತ್ರೀಯ ಮತ್ತು ಲಘು ಸಂಗೀತ, ನಟನೆ, ದೇಸಿ ಆಟಗಳು ಇತ್ಯಾದಿಗಳ ಮೂಲಕ ಮಕ್ಕಳ ಸರ್ವಾಂಗೀಣ ಕಲಿಕೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತದೆ. ಹೊರಾಂಗಣ ಕ್ಷೇತ್ರ ಭೇಟಿಗಳು- ದೊಡ್ಡವರು ಹಾಗೂ ಮಕ್ಕಳ ಕಲಿಕೆಯ ಒಂದು ಪ್ರಮುಖ ಅಂಶ. ನಮ್ಮ ಮಕ್ಕಳು ಈಗಾಗಲೇ ಕುಪ್ಪಳಿ, ಮೇಲುಕೋಟೆಯ ‘ಹೊಸ ಜೀವನ ದಾರಿ’, ಜಲ ಸಂಸ್ಕರಣಾ ಸ್ಥಾವರ, ಬ್ಯಾಂಕ್, ಅಗ್ನಿ ಶಾಮಕ ದಳದ ಕಛೇರಿ ಹಾಗೂ ಮೈಸೂರಿನ ಪಾರಂಪರಿಕ ಕಟ್ಟಡಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ಇದರಿಂದ ಮಕ್ಕಳು ಗಮನಿಸುವಿಕೆ, ವ್ಯತ್ಯಾಸಗಳನ್ನು ಗುರುತಿಸುವುದು ಹಾಗೂ ಮತ್ತೂ ಹೆಚ್ಚು ತಿಳಿಯುವ ಹಂಬಲ ಇತ್ಯಾದಿ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯವಾಗಿದೆ.

ಅರಿವು ಶಾಲೆಯ ಪ್ರಮುಖ ಅಂಶಗಳು:
• ಚಟುವಟಿಕೆ ಆಧಾರಿತ ಕಲಿಕೆ
• ವಿಷಯಾಧಾರಿತ ಅಧ್ಯಯನ (ಅಂತರ ಶಾಸ್ತ್ರೀಯ ಮಾರ್ಗ)
• ಸಮುದಾಯದ ಭಾಗವಹಿಸುವಿಕೆ
• ಪ್ರಕೃತಿಯಿಂದ ಮತ್ತು ಪ್ರಕೃತಿಯ ಬಗ್ಗೆ ಕಲಿಕೆ
• ಖಾದಿ ಸಮವಸ್ತ್ರ (ತಮಗಿಷ್ಟವಾದ ಬಣ್ಣದ್ದು)
• ಯಾವುದೇ ಸಿದ್ಧಾಂತ/ತತ್ವದ ಕಡೆಗೂ ವಾಲದೆ ಕಲಿಕಾ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನೂ ಒಳಗೂಡಿಸಿಕೊಂಡಿರುವುದು
• ಆರೋಗ್ಯಕರ ಬದುಕು (ಶುಕ್ರವಾರ-, ಫಲಾಹಾರ, ಸಾವಯವ ಆಹಾರದ ಬಗ್ಗೆ ತಿಳುವಳಿಕೆ, ಚಾರಣ ಇತ್ಯಾದಿ ದೈಹಿಕ ಚಟುವಟಿಕೆಗಳು)
• ಶಿಕ್ಷಣದಲ್ಲಿ 30ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳ ಸಕ್ರಿಯ ಪಾತ್ರ
• ಪ್ರತಿದಿನವೂ ಮೊದಲ ಅರ್ಧ ದಿನ ಪಟ್ಯ ಚಟುವಟಿಕೆಗಳಿಗೆ ಮತ್ತು ಉಳಿದರ್ಧ ದಿನ ಸಹ ಮತ್ತು ಪಟ್ಯೇತರ ಚಟುವಟಿಕೆಗಳಿಗೆ ಮೀಸಲು.(ಸಂಪನ್ಮೂಲ ವ್ಯಕ್ತಿಗಳಿಂದ)


Powered by WordPress and HQ Premium Themes.
Powered By Indic IME