info@arivu.org
+91 94822-77872
ಕನ್ನಡ  English 

ಅಣಕು ಚುನಾವಣೆ

September 2, 2016 Arivu Activities

ಬ್ರಿಟಿಷ್ ರಾಜಾಧಿಪತ್ಯದಲ್ಲಿದ್ದ ಭಾರತವು ೧೯೪೭ರಲ್ಲಿ ಸ್ವಾತಂತ್ರ್ಯ ಹೊಂದಿ ಪ್ರಜಾಪ್ರಭುತ್ವ ರಾಷ್ಟ್ರವಾಯಿತು ಮತ್ತು ನಂತರ ೧೯೫೬ರಲ್ಲಿ ತನ್ನದೇ ಸಂವಿಧಾನವನ್ನು ಹೊಂದಿ ಗಣರಾಜ್ಯವಾಯಿತು.  ಪ್ರಜಾಪ್ರಭುತ್ವದಲ್ಲಿ ಪ್ರತೀ ೫ ವರ್ಷಗಳಿಗೊಮ್ಮೆ ಪ್ರಜೆಗಳೇ ದೇಶ ಮತ್ತು ರಾಜ್ಯಗಳನ್ನಾಳುವ ಸರ್ಕಾರಗಳನ್ನು ಚುನಾವಣೆಗಳ ಮೂಲಕ ಆರಿಸುತ್ತಾರೆ ಎಂಬ ಈ ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳು ಪಠ್ಯ ಪುಸ್ತಕದಿಂದ ಅರಿತಿದ್ದರು. ಈ ಬಗೆಗೆ ಹೆಚ್ಚಿನ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒಳಗೊಂಡಂತೆ ಒಂದು ಅಣಕು ಚುನಾವಣೆಯನ್ನು ಶಾಲೆಯಲ್ಲಿ ಆಯೋಜಿಸಲಾಗಿತ್ತು.  ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಂಡು ತಮಗೇ ಮತವನ್ನು ಚಲಾಯಿಸಬೇಕೆಂದು ಕೋರಿದರು.  ಅದರಲ್ಲಿ ಒಬ್ಬ ಅಭ್ಯರ್ಥಿಯು ಪುಟ್ಟ ಮಕ್ಕಳಿಗೆ ಗೋಡಂಬಿಯನ್ನು ಹಂಚಿ ತನ್ನನ್ನೇ ಆರಿಸಬೇಕೆಂದು ಕೋರಿದ್ದು ಇಂದಿನ ಪರಿಸ್ಥಿತಿಯ ದ್ಯೋತಕವಾಗಿತ್ತು! ಶಿಕ್ಷಕರೇ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಗೋಪ್ಯ ಮತದಾನ, ಮತ ಎಣಿಕೆ ಮತ್ತು ಶಾಲೆಯ ಸಂಪುಟ ರಚನೆಯಲ್ಲಿ ಸಹಕರಿಸಿದರು.  ಇಡೀ ಪ್ರಕ್ರಿಯೆಯು ಮಕ್ಕಳಿಗೆ ಒಂದು ನೈಜ ಅನುಭವವನ್ನು ಕಟ್ಟಿಕೊಟ್ಟಿದ್ದಲ್ಲದೆ ಅವರಲ್ಲಿ ಮೇಳೈಸಿದ ರೋಮಾಂಚನ, ಹತಾಶೆ ಮತ್ತು ಸಂಭ್ರಮದ ಭಾವನೆಗಳನ್ನು ಸೆರೆಹಿಡಿಯಿತು. ನಂತರ ನಡೆದ ಸಂವಾದದಲ್ಲಿ ‘ಎಲ್ಲರ ಅಂತರಾಳದಲ್ಲೂ ರಾಜಕೀಯ ಪ್ರಜ್ಞೆಯಿರುತ್ತದೆ, ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಿ ಅರ್ಹರನ್ನು ಚುನಾಯಿಸುವ ಮೂಲಕ ಒಳ್ಳೆಯ ಸಮಾಜವನ್ನು ಕಟ್ಟಿ ದೇಶವನ್ನು ಸದೃಢಗೊಳಿಸಬಹುದೆಂದು’ ಮಕ್ಕಳು ಅಭಿಪ್ರಾಯಪಟ್ಟರು.

IMG_20160625_095557_HDRIMG_20160625_101815_HDRIMG_20160625_101324_HDRIMG_20160625_100147_HDRIMG_20160625_101101_HDRIMG_20160625_102156_HDRIMG_20160625_105824IMG_20160625_105608


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME