info@arivu.org
+91 94822-77872
ಕನ್ನಡ  English 

ತಾಳಮದ್ದಲೆ ಕಾರ್ಯಕ್ರಮ

November 8, 2016 Arivu Events

ದಿನಾಂಕ 24.9.2016 ರಂದು ಶನಿವಾರ ಸಂಜೆ ೬ ಗಂಟೆಗೆ ದಕ್ಷಿಣ ಕನ್ನಡ ದ ಪ್ರಸಿದ್ಧ ಕಲಾವಿದರಿಂದ ’ಶ್ರೀರಾಮ ನಿರ್ಯಾಣ’ ಪ್ರಸಂಗದ ತಾಳಮದ್ದಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀರಾಮನ ಪಾತ್ರವನ್ನು ಶ್ರೀ ರಾಧಾಕೃಷ್ಣ ಕಲ್ಚಾರ್ ನಿರ್ವಹಿಸಿದರು, ದುರ್ವಾಸ ಮುನಿಯ ಪಾತ್ರವನ್ನು ಶ್ರೀ ಜಬ್ಬಾರ್ ಸಮೋ ನಿರ್ವಹಿಸಿದರು, ಶ್ರೀ ಹರೀಶ್ ಬೊಳಂತಿಮೊಗರು ಕಾಲಪುರುಷನಾದರೆ ಲಕ್ಷ್ಮಣನ ಪಾತ್ರವನ್ನು ಶ್ರೀ ರಾಮ ಜೋಯಿಸ ಬೆಳ್ಳಾರೆಯವರು ನಿರ್ವಹಿಸಿದರು. ಹಿಮ್ಮೇಳದಲ್ಲಿ ಶ್ರೀ ರಮೇಶ ಭಟ್ ಪುತ್ತೂರು ಭಾಗವತರಾಗಿದ್ದರೆ, ಮದ್ದಳೆ ನುಡಿಸಿದವರು ಶ್ರೀ ಪದ್ಯಾಣ ಶಂಕರ ನಾರಾಯಣ ಭಟ್ ರವರು. ಚಂಡೆಯನ್ನು ಶ್ರೀ ಜಗನ್ನಿವಾಸರಾವ್ ಪುತ್ತೂರು ನುಡಿಸಿದರು. ಶ್ರೀರಾಮ ಹನ್ನೊಂದು ಸಾವಿರ ವರ್ಷಗಳ ಜೀವಿತಾವಧಿಯ ನಂತರ ದೇವೇಂದ್ರನ ಆಜ್ಞೆಯ ಮೇರೆಗೆ ಕಾಲಪುರುಷ ಕರೆದೊಯ್ಯಲು ಬಂದಾಗ ನಡೆಯುವ ಪ್ರಸಂಗವನ್ನು ಕಲಾವಿದರು ಮನೋಜ್ಞವಾಗಿ ನಡೆಸಿಕೊಟ್ಟರು. ಸುಮಾರು ಮೂರುವರೆ ಗಂಟೆಗಳ ಕಾಲ ತಮ್ಮ ವಿದ್ವತ್ತಿನಿಂದ ಸಂಭಾಷಣೆಯನ್ನು ನಡೆಸಿ ಉತ್ತಮವಾದ ಪಾತ್ರಪೋಷಣೆ ಮಾಡಿ ಕಲಾಸಕ್ತರ ಮನಗೆದ್ದರು ಮತ್ತು ಹಿಮ್ಮೇಳವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.  ಈ ಕಾರ್ಯಕ್ರಮವನ್ನು ಸಂಸ್ಕೃತಿ ಚಿಂತಕರಾದ ಪ್ರೊ. ಗೋವಿಂದಯ್ಯನವರು ಮತ್ತು ಜಾನಪದ ತಜ್ಞರಾದ ಪ್ರೊ. ಕಾಳೇಗೌಡ ನಾಗವಾರ ವೀಕ್ಷಿಸಿದರು. ಎಂದಿನಂತೆ ಶಾಲೆಯ ಮಕ್ಕಳು, ಶಿಕ್ಷಕರು, ಪೋಷಕರು, ಅವರ ಬಂಧುಗಳು ಮತ್ತು ಮೈಸೂರಿನ ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಕಲಾಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಿದರು.  ಕಾರ್ಯಕ್ರಮದ ಆರಂಭಕ್ಕೆ ಮುನ್ನ ಡಾ. ಸುಂದರ ಕೆನ್ನಾಜೆಯವರು ತಾಳಮದ್ದಲೆ ಕುರಿತು ಪರಿಚಯ ನೀಡಿದರು. ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಜನಾರ್ಧನರವರು ಸ್ವಾಗತಿಸಿದರೆ ಶ್ರೀ ಭರ್ತಿ ಒಲಿವೇರಾ ನಿರೂಪಣೆ ಮಾಡಿದರು.

taala-maddale-2016-invitation


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME