info@arivu.org
+91 94822-77872
ಕನ್ನಡ  English 

ತತ್ವ

 

What should be our Educational Philosophy ?

ನಾವು ಯಾವುದೇ ಒಂದು ತತ್ತ್ವಕ್ಕೆ ಮಾತ್ರ  ಅಂಟಿಕೊಂಡಿಲ್ಲ. ನಮ್ಮ ತಂಡದಲ್ಲಿ ಮಹಾತ್ಮ ಗಾಂಧಿಯವರ ’ನಯ್ ತಲೀಮ್’ ನಿಂದ  ಕೆನ್ ರಾಬಿನಸನ್ ಅನುಮೋದಿಸಿದ ಮಾದರಿ ಬದಲಾವಣೆಗಳವರೆಗೂ ಅಧ್ಯಯನ ಮಾಡಿರುವವರಿದ್ದಾರೆ. ಆದರೆ ಒಂದು ಶಾಲೆಯಾಗಿ ನಾವು ಯಾವುದೇ ಸಿದ್ಧಾಂತಕ್ಕೆ ಕಟ್ಟುಬಿದ್ದಿಲ್ಲ.

ಕಲಿಕೆಯನ್ನು ಒಂದು ನಲಿವಿನ ಪ್ರಕ್ರಿಯೆಯನ್ನಾಗಿ ಮಾಡುವುದೇ ಅರಿವು ಶಾಲೆಯ ಮೂಲ ಉದ್ದೇಶ. ಅರಿವು ಬಳಗದ ಸದಸ್ಯರೆಲ್ಲರೂ ಹೊಸ ವಿಷಯಗಳನ್ನು ಕಲಿಯುವುದನ್ನು ಇಷ್ಟಪಡುತ್ತಾರೆ. ಸಂತಸದಿಂದ ಬದುಕಲು ಹೊಸ ವಿಷಯಗಳ ಕಲಿಕೆ ಅನಿವಾರ್ಯ ಎಂಬುದು ನಮ್ಮ ನಂಬಿಕೆ. ಈ ಸರಳ ಅಂಶವೇ ನಾವು ಅರಿವು ಪ್ರಾರಂಭಿಸಲು ಕಾರಣ.

ಮಕ್ಕಳು ಸ್ವಾಭಾವಿಕವಾಗಿಯೇ ಹೊಸ ಹೊಸ ವಿಷಯಗಳನ್ನು ತಿಳಿಯಲು ಇಷ್ಟ ಪಡುತ್ತಾರೆ. ದುರದೃಷ್ಟವಶಾತ್, ಮಕ್ಕಳ ಈ ಗುಣಕ್ಕೆ ಶಾಲೆಯಿಂದ ಮತ್ತು ಪೋಷಕರಿಂದ ಅನುಮೋದನೆ ಸಿಗುವುದಿಲ್ಲ. ಬಾಲ್ಯಾವಸ್ಥೆಯಲ್ಲಿ ತಮಗೆ ಇಷ್ಟ ಬಂದದ್ದನ್ನು ಕಲಿಯುವ ಸ್ವಾತಂತ್ರ್ಯ ಕಲ್ಪಿಸಿಕೊಡುವುದು ಬಹಳ ಮುಖ್ಯ. ಅರಿವು ಶಾಲೆಯಲ್ಲಿ ಕಲಿಕೆ ಒಂದು ಆರಾಮದಾಯಕ, ಅರ್ಥಪೂರ್ಣ ಅನುಭವವಾಗುವಂತೆ ಮಾಡಲು ಯೋಜಿಸಲಾಗುತ್ತದೆ.

ಅರಿವು ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಕೇಂದ್ರ ಬಿಂದು ಪರಿಸರ ಸಂರಕ್ಷಣೆ. ನಾವು ಪರಿಸರವನ್ನು ರಕ್ಷಿಸದೇ ಬೇರೇನನ್ನೂ ರಕ್ಷಿಸುವುದು ಕಷ್ಟ ಸಾಧ್ಯ ಅಥವಾ ಅಸಾಧ್ಯ.

ನಮ್ಮ ಕೆಲವು ನಂಬಿಕೆಗಳು:
1. ಕಲಿಕೆ ಒಂದು ನಲಿವಿನ ಪ್ರಕ್ರಿಯೆಯಾಗಬೇಕು.
2. ಪರಿಸರ ಸಂರಕ್ಷಣೆ ಶಿಕ್ಷಣದ ಮುಖ್ಯ ಅಂಶವಾಗಬೇಕು.
3. ಮಾಡಿ ಕಲಿಯುವುದೇ ಅತ್ತ್ಯುತ್ತಮ ಕಲಿಕಾ ವಿಧಾನ.
4. ಶಾಲೆಯು ಪ್ರಸ್ತುತ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪ್ರಶ್ನಿಸಬೇಕು.
5. ಕಲಿಕೆ ತರಗತಿಗೆ ಮಾತ್ರ ಸೀಮಿತವಾಗಿಲ್ಲ.
6. ಮಕ್ಕಳು ಹಲವಾರು ರೀತಿಗಳಲ್ಲಿ ಕಲಿಯುತ್ತಾರೆ. ಆದ್ದರಿಂದ ಶಾಲೆಯು ಮಕ್ಕಳನ್ನು ಕಲಿಕೆಯ ವಿವಿಧ ಮಜಲಿಗಳಿಗೆ ಪರಿಚಯಿಸಬೇಕು.
7. ಒಳ್ಳೆಯ ಶಿಕ್ಷಣ ಎಲ್ಲರ ಕೈಗೆಟುಕುವಂತಿರಲು ಸಾಧ್ಯ.
8. ಪರಸ್ಪರ ಸಹಯೋಗ(ಸಹಕಾರ) ಒಂದು ಪ್ರಮುಖ ಅಂಶ.
9. ಮಕ್ಕಳು ಶಾಲೆಯಲ್ಲಿ  ವಿಶ್ವಾಸಿ ಮತ್ತು ಸ್ವಾವಲಂಬಿ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು.

 


Powered by WordPress and HQ Premium Themes.
Powered By Indic IME