info@arivu.org
+91 94822-77872
ಕನ್ನಡ  English 

ಪ್ರಾರಂಭ

ಪ್ರಾರಂಭ

ಪ್ರಸಕ್ತ ಚಾಲ್ತಿಯಲ್ಲಿರುವ ಮೂಲತಃ ಬ್ರಿಟಿಷ್ ಶಿಕ್ಷಣ ಪದ್ಧತಿಯ ಮೇಲಿನ ಕಳವಳ ಮತ್ತು ನಿರಾಶೆ ಹೊಸದೇನಲ್ಲ. 1908ರಲ್ಲೇ ಗಾಂಧೀಜಿಯವರು ಈ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು.

ಈ ಕಾರ್ಖಾನೆ ರೀತಿಯ ಶಿಕ್ಷಣ ಪದ್ಧತಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿವಿದ್ದ ಕೆಲವು ಸ್ನೇಹಿತರು, ‘ತಾರೆ ಜಮೇನ್ ಪರ್’ ಹಿಂದಿ ಚಿತ್ರವನ್ನು ವೀಕ್ಷಿಸಿ ಹರಟುತ್ತಿದ್ದರು. ಆ ಸಂಧರ್ಭದಲ್ಲೇ ಅವರಿಗೆ ಶಾಲೆ ಶುರು ಮಾಡುವ ಯೋಚನೆ ಬಂದದ್ದು.

ಅಂದಿನಿಂದ ಮತ್ತೂ ಹಲವಾರು ಸ್ನೇಹಿತರು ಕೈಜೋಡಿಸಿ ‘ಅರಿವು’ ಇಂದಿರುವ ಸ್ಥಿತಿಗೆ ತಂದಿದ್ದಾರೆ. ಕೆಲವರು ಹೊಸ ಯೋಚನೆಗಳನ್ನು, ಕೆಲವರು ಭೂಮಿಯನ್ನು, ಮತ್ತೆ ಕೆಲವರು ಹಣವನ್ನು ಕೊಡುವುದರ ಮೂಲಕ ನೆರವಾಗಿದ್ದಾರೆ.

ಅರಿವು ಹಲವು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನಾಗರೀಕರು ಸೇರಿ ಉತ್ತಮ ಶಿಕ್ಷಣ ಪದ್ಧತಿ ಮತ್ತು ಗೌರವ, ಸಂತೋಷ, ಹೆಮ್ಮೆಗಳಿಂದ ಕೂಡಿರುವ ಜೀವನ ಸಂಸ್ಕೃತಿಯನ್ನು ಕಂಡುಕೊಳ್ಳಲು ಮಾಡಿರುವ ಪ್ರಯತ್ನ.

ಶಾಲೆ ಪ್ರಾರಂಭವಾದದ್ದು ಸ್ನೇಹಿತರಾದ ಶ್ರೀ. ಕೆ. ರಾಘವೇಂದ್ರರವರು ಬಿಟ್ಟು ಕೊಟ್ಟ ಸಾವಯವ ತೋಟದಲ್ಲಿ (2008). ಹಿತೈಷಿಗಳ ಸಹಾಯದಿಂದ ಇಂದು ಶಾಲೆಗೆ ಅದರದೇ ಆದ ಸ್ವಂತ ಭೂಮಿ ಇದೆ . ಸುಮಾರು 45 ಜನ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಮತ್ತು ಕಾರ್ಯನಿರ್ವಾಹಕರು ಸೇರಿ ಸುಮಾರು 25 ಮಂದಿ ನೌಕರರಿದ್ದಾರೆ.

ಶಾಲೆ ಈಗ ಒಂದು ಕಲಿಕಾ ಕೇಂದ್ರವಾಗಿ ಮಾರ್ಪಾಟಾಗಲು ಸಿದ್ಧವಾಗಿದೆ. ಈ ಪರಿಸರ ಸ್ನೇಹಿ ಶಾಲೆಯಲ್ಲಿ ಸಧ್ಯದಲ್ಲೇ ಒಂದು ಸಮುದಾಯ ಸಂಪನ್ಮೂಲ ಕೇಂದ್ರ ಮತ್ತು ಒಂದು ಚಿಟ್ಟೆ ಉದ್ಯಾನವನ ಕೂಡ ಪ್ರಾರಂಭವಾಗಲಿದೆ.


Powered by WordPress and HQ Premium Themes.
Powered By Indic IME