info@arivu.org
+91 94822-77872
ಕನ್ನಡ  English 

ತಾಳಮದ್ದಲೆ ಕಾರ್ಯಕ್ರಮ

November 8, 2016 Arivu Events

ದಿನಾಂಕ 24.9.2016 ರಂದು ಶನಿವಾರ ಸಂಜೆ ೬ ಗಂಟೆಗೆ ದಕ್ಷಿಣ ಕನ್ನಡ ದ ಪ್ರಸಿದ್ಧ ಕಲಾವಿದರಿಂದ ’ಶ್ರೀರಾಮ ನಿರ್ಯಾಣ’ ಪ್ರಸಂಗದ ತಾಳಮದ್ದಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀರಾಮನ ಪಾತ್ರವನ್ನು ಶ್ರೀ ರಾಧಾಕೃಷ್ಣ ಕಲ್ಚಾರ್ ನಿರ್ವಹಿಸಿದರು, ದುರ್ವಾಸ ಮುನಿಯ ಪಾತ್ರವನ್ನು ಶ್ರೀ ಜಬ್ಬಾರ್ ಸಮೋ ನಿರ್ವಹಿಸಿದರು, ಶ್ರೀ ಹರೀಶ್ ಬೊಳಂತಿಮೊಗರು ಕಾಲಪುರುಷನಾದರೆ ಲಕ್ಷ್ಮಣನ ಪಾತ್ರವನ್ನು ಶ್ರೀ ರಾಮ ಜೋಯಿಸ ಬೆಳ್ಳಾರೆಯವರು ನಿರ್ವಹಿಸಿದರು. ಹಿಮ್ಮೇಳದಲ್ಲಿ ಶ್ರೀ ರಮೇಶ ಭಟ್ ಪುತ್ತೂರು ಭಾಗವತರಾಗಿದ್ದರೆ, ಮದ್ದಳೆ ನುಡಿಸಿದವರು ಶ್ರೀ ಪದ್ಯಾಣ ಶಂಕರ ನಾರಾಯಣ ಭಟ್ ರವರು. ಚಂಡೆಯನ್ನು ಶ್ರೀ ಜಗನ್ನಿವಾಸರಾವ್ ಪುತ್ತೂರು […]

More

0

ಚಲನ ಚಿತ್ರ ನಿರ್ದೇಶಕ ಶ್ರೀ ಪಿ.ಶೇಷಾದ್ರಿಯವರೊಡನೆ ಮಕ್ಕಳ ಸಂವಾದ

September 30, 2016 Arivu General

2004-05ನೇ ಸಾಲಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ಬೇರು”  6ನೇ ತರಗತಿ ವಿಧ್ಯಾರ್ಥಿಗಳಿಗೆ ಪಠ್ಯವಾಗಿದೆ.  ಭ್ರಷ್ಟ ವ್ಯವಸ್ಥೆಯಿಂದ ತನ್ನ ಮನೆಯನ್ನು ಮತ್ತು ತನ್ನ ಪ್ರಾಣವನ್ನೂ ಕಳೆದುಕೊಳ್ಳುವ ಬಡ ಗೊರವಯ್ಯನ ಕಥೆಯಿರುವ ಚಿತ್ರವನ್ನು ವೀಕ್ಷಿಸಿದ್ದ ಮಕ್ಕಳ ಮನದಲ್ಲಿ ಹಲವಾರು ಸಂಶಯಗಳು ಕುಡಿಯೊಡೆದಿದ್ದವು. ಇವನ್ನು ನಿವಾರಿಸಲೋ ಎಂಬಂತೆ,ಇದೇ ಸಂಧರ್ಭದಲ್ಲಿ ತಮ್ಮ ಕಾರ್ಯನಿಮಿತ್ತ ಮೈಸೂರಿಗೆ ಬಂದಿದ್ದ  ಚಿತ್ರದ ನಿರ್ದೇಶಕರಾದ ಶ್ರೀ ಪಿ.ಶೇಷಾದ್ರಿಯವರು ದಿನಾಂಕ 18.08.2016 ರಂದು  ಶಾಲೆಗೆ ಭೇಟಿ ನೀಡಿದರು.  ಮಕ್ಕಳೊಡನೆ ನಿರ್ದೇಶಕರ ಸಂವಾದವನ್ನು ಶಾಲೆಯ ಲತಾಮಂಟಪದಲ್ಲಿ  […]

More

0

ವಿಶ್ವ ಪರಿಸರ ದಿನ – ೨೦೧೬

September 11, 2016 Arivu Events

ಜೂನ್ ಮೊದಲ ಭಾನುವಾರವನ್ನು ವಿಶ್ವದಾದ್ಯಂತ ಪರಿಸರ ದಿನ ಎಂದು ಆಚರಿಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಈ ಬಾರಿ, ೦೫.೦೬.೨೦೧೬ ರ ಭಾನುವಾರದಂದು ಕೆಲವು ಪೋಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಶಾಲೆಯ ಮುಂಭಾಗದ ರಸ್ತೆ ಅಂಚಿನಲ್ಲಿ ಔಪಚಾರಿಕವಾಗಿ ಸಸಿ ನೆಡುವ ಮೂಲಕ ನಡೆಸಿಕೊಟ್ಟರು.  ನಂತರ ಶಾಲಾ ಆವರಣವು ಹಸಿರಿನಿಂದ ಕಂಗೊಳಿಸಲು ಅಗತ್ಯವಾದ ಹೂ ಗಿಡಗಳನ್ನು ಮತ್ತು ಮಕ್ಕಳಿಗೆ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಕೈತೋಟವನ್ನು ಅಭಿವೃದ್ಧಿಪಡಿಸಬೇಕೆಂದು ನಿಶ್ಚಯಿಸಲಾಯಿತು.  ದಿನಾಂಕ ೧೧.೬.೨೦೧೬ ರಂದು ಈ ಸಾಲಿನ ಪ್ರಥಮ ಪೋಷಕ-ಶಿಕ್ಷಕ […]

More

0

ಪ್ರಕೃತಿ ಅಧ್ಯಯನ – ನಾಗರಹೊಳೆ ವನ್ಯಧಾಮ

September 10, 2016 Arivu Activities

ಅರಿವು ಶಾಲೆಯ ೧ ರಿಂದ ೪ನೇ ತರಗತಿಯಲ್ಲಿ ಅಭ್ಯಸಿಸುವ ಮಕ್ಕಳು ಪ್ರಕೃತಿ ಅಧ್ಯಯನಕ್ಕಾಗಿ ಈ ಬಾರಿ ಆಯ್ದುಕೊಂಡ ಸ್ಥಳ ‘ನಾಗರಹೊಳೆ ವನ್ಯಧಾಮ’.  ೪೦ ಜನರ ತಂಡವು ದಿನಾಂಕ ೧-೨ನೇ ಸೆಪ್ಟೆಂಬರ್ ೨೦೧೬ ರಂದು ನಾಗರಹೊಳೆಗೆ ಭೇಟಿ ನೀಡಿತು.  ಮೊದಲ ದಿನ ವನ್ಯಧಾಮದಲ್ಲಿ ವಿಹರಿಸಿ ಅಲ್ಲಿಯೇ ರಾತ್ರಿ ಕಳೆದು ಎರಡನೆಯ ದಿನ ‘ಇರುಪ್ಪು ಜಲಪಾತಕ್ಕೆ’ ಭೇಟಿ ನೀಡಿ ಮೈಸೂರಿಗೆ ಹಿಂದಿರುಗುವುದು ಕಾರ್ಯಕ್ರಮದ ಸ್ಥೂಲ ರೂಪ.  ಅದರಂತೆ, ೧ನೇ ತಾರೀಖು ಅಪರಾಹ್ನದ ಹೊತ್ತಿಗೆ ನಾಗರಹೊಳೆಯಯನ್ನು ತಲುಪಿದ ತಂಡವು, ಭೋಜನದ ನಂತರ […]

More

0

ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯದ ಘಟಿಕೋತ್ಸವ

September 10, 2016 Arivu Teachers

ದಿನಾಂಕ ೧೭ ಆಗಸ್ಟ್ ೨೦೧೬ ರಂದು ನಡೆದ ‘ಅಜೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ’ ದ ನಾಲ್ಕನೇ ಘಟಿಕೋತ್ಸವವು ಅರಿವು ಬಳಗಕ್ಕೆ ಒಂದು ವಿಶೇಷ ಘಟನೆಯಾಗಿದೆ.  ಏಕೆಂದರೆ, ಶ್ರೀಯುತ ಕುಶಲ್, ಸಂಯೋಜಕರು, ಅರಿವು ವಿದ್ಯಾ ಸಂಸ್ಥೆ ಇವರಿಗೆ ಸದರಿ ಸಮಾರಂಭದಲ್ಲಿ ಕುಲಪತಿಗಳಾದ ಶ್ರೀ ಅಜೀಮ್ ಪ್ರೇಮ್ ಜಿ ಯವರು ‘ಶಿಕ್ಷಣ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು’ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ವಾಜುಬಾಯಿ ರುಢಾಯಿ ವಾಲ, ಕುಲಪತಿಗಳಾದ ಶ್ರೀ ಅಜೀಮ್ ಪ್ರೇಮ್ ಜಿ ಮತ್ತು […]

More

0

ಅಣಕು ಚುನಾವಣೆ

September 2, 2016 Arivu Activities

ಬ್ರಿಟಿಷ್ ರಾಜಾಧಿಪತ್ಯದಲ್ಲಿದ್ದ ಭಾರತವು ೧೯೪೭ರಲ್ಲಿ ಸ್ವಾತಂತ್ರ್ಯ ಹೊಂದಿ ಪ್ರಜಾಪ್ರಭುತ್ವ ರಾಷ್ಟ್ರವಾಯಿತು ಮತ್ತು ನಂತರ ೧೯೫೬ರಲ್ಲಿ ತನ್ನದೇ ಸಂವಿಧಾನವನ್ನು ಹೊಂದಿ ಗಣರಾಜ್ಯವಾಯಿತು.  ಪ್ರಜಾಪ್ರಭುತ್ವದಲ್ಲಿ ಪ್ರತೀ ೫ ವರ್ಷಗಳಿಗೊಮ್ಮೆ ಪ್ರಜೆಗಳೇ ದೇಶ ಮತ್ತು ರಾಜ್ಯಗಳನ್ನಾಳುವ ಸರ್ಕಾರಗಳನ್ನು ಚುನಾವಣೆಗಳ ಮೂಲಕ ಆರಿಸುತ್ತಾರೆ ಎಂಬ ಈ ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳು ಪಠ್ಯ ಪುಸ್ತಕದಿಂದ ಅರಿತಿದ್ದರು. ಈ ಬಗೆಗೆ ಹೆಚ್ಚಿನ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒಳಗೊಂಡಂತೆ ಒಂದು ಅಣಕು ಚುನಾವಣೆಯನ್ನು ಶಾಲೆಯಲ್ಲಿ ಆಯೋಜಿಸಲಾಗಿತ್ತು.  ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಂಡು ತಮಗೇ ಮತವನ್ನು ಚಲಾಯಿಸಬೇಕೆಂದು […]

More

0

ಹಾಲಿನ ಡೈರಿಗೆ ಭೇಟಿ

August 30, 2016 Arivu Activities

ದಿನಾಂಕ ೩೦ ಜೂನ್ ೨೦೧೬ ರಂದು ೩ ಮತ್ತು ೪ ನೇ ತರಗತಿಯ ಮಕ್ಕಳು ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳದ ಡೈರಿ ಗೆ ಭೇಟಿ ನೀಡಿ ಹಾಲಿನ ಸಂಗ್ರಹ, ಸಂಸ್ಕರಣೆ ಮತ್ತು ಸಂಗ್ರಹದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇದಲ್ಲದೆ ಹಾಲಿನ ಇನ್ನಿತರ ಪದಾರ್ಥಗಳಾದ ಮೊಸರು, ಕೋವ, ಮಜ್ಜಿಗೆ, ಬೆಣ್ಣೆ, ಲಸ್ಸಿ ಮತ್ತು ಪೇಡ ತಯಾರಿಕೆಯನ್ನು ಗಮನಿಸಿದರು.  ಈ ಭೇಟಿಯಿಂದ ಮಕ್ಕಳು ಹಸುವಿನಿಂದ ಕರೆದ ಹಾಲು ಹೇಗೆ ಪ್ಯಾಕೆಟ್ ಆಗಿ ತಮ್ಮ ಮನೆಗಳನ್ನು ಸೇರುತ್ತದೆ ಎಂದು […]

More

0

ಅಗ್ನಿಶಾಮಕ ಠಾಣೆಗೆ ಭೇಟಿ

August 30, 2016 Arivu Activities

ಐದು ಮತ್ತು ಆರನೇ ತರಗತಿಯ ಮಕ್ಕಳು ಮೈಸೂರಿನ ಸರಸ್ವತಿಪುರಂನಲ್ಲಿರುವ ‘ಅಗ್ನಿಶಾಮಕ ಠಾಣೆ ‘ಗೆ ದಿ: ೨೯. ೬. ೨೦೧೬ ರಂದು ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳು ಠಾಣೆಯು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸಿದ್ದಲ್ಲದೆ ಬೆಂಕಿಯನ್ನು ಹೇಗೆ ನಂದಿಸಲಾಗುತ್ತದೆ ಎಂಬುದನ್ನು ಪ್ರದರ್ಶಿಸಿದರು.  ಮಕ್ಕಳ ಹಲವಾರು ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸಿ ಅಗ್ನಿಶಾಮಕ ದಳದ ಕೆಲಸ ಕೇವಲ ಬೆಂಕಿಯನ್ನು ನಂದಿಸುವುದಲ್ಲದೆ ಹಲವಾರು ಇತರ ತುರ್ತು ಪರಿಸ್ಥಿತಿಗಳನ್ನು (ನೀರಿನ ಅವಗಡಗಳು, ಕಟ್ಟಡ ಕುಸಿತ, ಪ್ರವಾಹ ಮತ್ತು ಇನ್ನಿತರೆ) ನಿಬಾಯಿಸುತ್ತದೆ ಎಂದು ತಿಳಿಸಿಕೊಟ್ಟರು

More

0

« Previous Posts

Powered by WordPress and HQ Premium Themes.
Powered By Indic IME