info@arivu.org
+91 94822-77872
ಕನ್ನಡ  English 

ರಾಷ್ತ್ರೀಯ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ ಭೇಟಿ

August 29, 2016 Arivu Activities

ದಿನಾಂಕ ೧ನೇ ಜುಲೈ ೨೦೧೬ ರಂದು ೫ ರಿಂದ ೮ನೇ ತರಗತಿಯ ಮಕ್ಕಳು ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ‘ರಾಷ್ತ್ರೀಯ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ’ ಕ್ಕೆ ಭೇಟಿ ನೀಡಿದರು.  ಅಲ್ಲಿನ ಮುಖ್ಯಸ್ಥರು ಮಕ್ಕಳಿಗೆ ವಸ್ತುಸಂಗ್ರಹಾಲಯದ ಉದ್ದೇಶ ಮತ್ತು ಉಪಯುಕ್ತತೆಯನ್ನು ತಿಳಿಸಿಕೊಟ್ಟರು.  ದೇಶದ ನಾಲಕ್ಕು ಭಾಗಗಳಲ್ಲಿ ಇಂತಹ ಸಂಗ್ರಹಾಲಯಗಳನ್ನು ಭಾರತ ಸರ್ಕಾರವು ಸ್ಥಾಪಿಸಿದ್ದು, ಇದು ದಕ್ಷಿಣ ಭಾರತದ ಏಕೈಕ ಕೇಂದ್ರವಾಗಿದೆ. ಭೂಮಿಯಲ್ಲಿ ಜೀವವಿಕಾಸ, ಡೈನೋಸಾರುಗಳ ಅವನತಿ, ಮತ್ತು ಪಶ್ಚಿಮ ಘಟ್ಟಗಳ ಬಗೆಗೆ ವಿಶೇಷ ಮಾಹತಿಯನ್ನು ಮಕ್ಕಳು ಅರಿತರು

More

0

೭೦ನೇ ಸ್ವಾತಂತ್ರ್ಯ ದಿನಾಚರಣೆ

August 18, 2016 Arivu Events

ಅರಿವು ಶಾಲೆಯಲ್ಲಿ ದಿನಾಂಕ ೧೫.೮.೨೦೧೬ ರಂದು ಒಂದೇ ದಿವಸ ೩ ಬಾರಿ ಸ್ವಾತಂತ್ರ್ಯಾಚರಣೆ ಮಾಡಲಾಯಿತು!  ಮೊದಲು ಪೋಷಕರಾದ ಶ್ರೀಮತಿ ಸುಷ್ಮ ಮತ್ತು ಶಿಕ್ಷಕರಾದ ಶ್ರೀಮತಿ ಸುಮನಾ ರವರು ದ್ವಜಾರೋಹಣ ನೆರೆವೇರಿಸಿ ೭೦ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರೆ, ಮಕ್ಕಳು ಅಭಿನಯಿಸಿದ ‘ಸ್ವಾತಂತ್ರ್ಯೋತ್ಸವ’ ಎಂಬ ನಾಟಕದಲ್ಲಿ ಶಾಸಕಿ ಪಾತ್ರಧಾರಿಯಾದ ಕು. ಅದಿತಿಯವರು ಮತ್ತೊಮ್ಮೆ  ದ್ವಜಾರೋಹಣ ನೆರೆವೇರಿಸದರು!  ಇದು ಭಾರತ ದೇಶದ ಸ್ವಾತಂತ್ರ್ಯಾಚರಣೆಯಾದರೆ, ಜರ್ಮನಿಯಿಂದ ಆಗಮಿಸಿರುವ ವಿದ್ಯಾರ್ಥಿ ಸ್ವಯಂಸೇವಕರಾದ  ಟಿಮ್ ಮತ್ತು ಫ್ಲಿಫ್ಸ್ ರವರು ಹೇಗೆ ಜರ್ಮನ್ ನಾಗರೀಕರು ಬರ್ಲಿನ್ […]

More

0

ಸುತ್ತೂರು ಸೈಕಲ್ ಪ್ರವಾಸ

August 9, 2016 Arivu Activities

ದಿನಾಂಕ ೬-೭ಆಗಸ್ಟ್ ೨೦೧೬ ರಂದು ಅರಿವು ಶಾಲೆಯ ಮಕ್ಕಳು (೫-೮ ನೇ ತರಗತಿ) ಮೈಸೂರಿನಿಂದ ೩೦ ಕಿ.ಮೀ ದೂರವಿರುವ ಸುತ್ತೂರು ಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿದ್ದರು. ಕೆಲವು ಸಾಹಸೀ ಮಕ್ಕಳು ಮತ್ತು ಶಿಕ್ಷಕರು ಸೈಕಲ್ ನಲ್ಲಿ ಪ್ರಯಾಣ ಮಾಡಿದರೆ ಮಿಕ್ಕವರು ಕಾರನ್ನು ಅವಲಂಬಿಸಿದರು.  ಶನಿವಾರ ೯.೩೦ ರ ಸಮಯಕ್ಕೆ ಹೊರಟ ತಂಡವು ಮಾರ್ಗ ಮದ್ಯೆ ಆಯರಹಳ್ಳಿಯ ಕುಸುಮಕ್ಕನ ಮನೆಯಲ್ಲಿ ಹೊಗೆಯಾಡುತ್ತಿದ್ದ ಇಡ್ಲಿಗಳನ್ನು ತಿಂದು ಊಟದ ಹೊತ್ತಿಗೆ ಸುತ್ತೂರನ್ನು ತಲುಪಿತು.  ಅಲ್ಲಿ ಶಿವರಾತ್ರೀಶ್ವರರ ಗದ್ದುಗೆ, ಕಪಿಲಾ ನದಿ ತೀರ , […]

More

0

ಅರಿವು ಹಬ್ಬ 2016

April 27, 2016 Arivu Events

ದಿನಾಂಕ 2 ಏಪ್ರಿಲ್ 2016 ರಂದು ವಾರ್ಷಿಕ ಆಚರಣೆಯಾದ ‘ಅರಿವು ಹಬ್ಬವನ್ನು’ ವಿವಿದ ಪಾರಂಪರಿಕ ಮತ್ತು ಜಾನಪದ ಕಲೆಗಳನ್ನು ಪೋಷಕರು ಮತ್ತು ಶಿಕ್ಷಕರ ಕಲಾ ಪ್ರದರ್ಶನದ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಈ ದಿನವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗಿಸದೆ, ಹೊಸ ಕಟ್ಟಡದ ಉದ್ಘಾಟನೆ, ಗಂಥಾಲಯದ ಲೋಕಾರ್ಪಣೆ, ಶಾಲೆಯ ಏಳಿಗೆಗಾಗಿ ದುಡಿದ ಸಹೃದಯರಿಗೆ ಕೃತಜ್ಙತೆ ಅರ್ಪಿಸುವ ಮತ್ತು ಮಕ್ಕಳಿಗೆ ನೆನಪಿನ ಕಾಣಿಕೆ ಸಲ್ಲಿಸುವ ಕಾರ್ಯವನ್ನೂ ನೆರವೇರಿಸಲಾಯಿತು. ಶ್ರೀಮತಿ ರೇವತಿ ಶರ್ಮ ಹಾಗು ಶ್ರೀಮತಿ ಸೌಮ್ಯ ರವರ “ಕಾಯೋ ಶ್ರೀ ಗೌರಿ” […]

More

0

ವಿಷಯಾಧಾರಿತ ಕಲಿಕೆ ‘ಸೈಕಲ್’ – ಅನುಭವ ಹಂಚಿಕೆ

February 11, 2016 Arivu Events

ದಿನಾಂಕ 30.1.2016 ರ ಶನಿವಾರದಂದು “ವಿಷಯಾಧಾರಿತ ಕಲಿಕೆ ‘ಸೈಕಲ್’ – ಅನುಭವ ಹಂಚಿಕೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಲಿಕಾ ಪ್ರದರ್ಶನವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಮೊದಲ ಭಾಗವಾಗಿ ಸಂಜೆ 3.30 ರಿಂದ 6 ರವರೆಗೆ, ಈ 5 ತಿಂಗಳಲ್ಲಿ ಮಕ್ಕಳು ‘ಸೈಕಲ್’ ಕೇಂದ್ರವಾಗಿಟ್ಟುಕೊಂಡು ತಾವು ಕಲಿತ ‘ಇತಿಹಾಸ, ಗಣಿತ, ವಿಜ್ಞಾನ, ಭೂಗೋಳ ಮತ್ತು ಇತರ ವಿಷಯಗಳನ್ನು’ ಪ್ರದರ್ಶಿಕೆಗಳ ಮೂಲಕ ಪೋಷಕರು ಮತ್ತು ಅತಿಥಿಗಳಿಗೆ ವಿವರಿಸಿದರು.  ಮಕ್ಕಳೇ ಕನ್ನಡ/ಇಂಗ್ಲೀಶ್ ಭಾಷೆಯಲ್ಲಿ ರಚಿಸಿದ ಸೈಕಲ್ ಕೇಂದ್ರಿತ ಕವಿತೆಗಳು, ಕತೆಗಳು ಸ್ವಾನುಭವಗಳು ಮತ್ತು […]

More

0

ಗಣರಾಜ್ಯೋತ್ಸವ ಆಚರಣೆ

January 31, 2016 Arivu Activities

ಅರಿವು ಶಾಲೆಯಲ್ಲಿ ೬೭ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪೋಷಕರಾದ ಶ್ರೀಮತಿ ಉಮಾ ರವರು ದ್ವಜಾರೋಹಣ ನೆರವೇರಿಸಿದರು ಮತ್ತು ಶಾಲೆಯ ಶಿಕ್ಷಕರಾದ ಶ್ರೀ ರಮೇಶ್ ರವರು ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆಯನ್ನು ಮಕ್ಕಳಿಗೆ ಸರಳವಾಗಿ ತಿಳಿಸಿಕೊಟ್ಟರು.  ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಿದರು.  ಈ ಸುಸಂದರ್ಭದಲ್ಲಿ ಅರಿವು ಶಾಲೆಯ ‘ಆಶಯ ಗೀತೆಯ’ ಲೋಕಾರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.  ಗೀತೆಯ ಸಾಹಿತ್ಯ ರಚನೆಮಾಡಿದ ಕವಿ ಶ್ರೀ ಮಂಜುನಾಥ್ ಮತ್ತು ಸಂಗೀತ ಸಂಯೋಜಿಸಿ ಹಾಡಿದ ಶ್ರೀಯುತ ಹರಿಕಾವ್ಯರವರು  ಆಶಯ ಗೀತೆಯ ಪ್ರಥಮ ಪ್ರದರ್ಶನಕ್ಕೆ […]

More

0

ಅಂತರರಾಷ್ಟ್ರೀಯ ಬೆಳಕಿನ ವರ್ಷಾಚರಣೆ

January 5, 2016 Arivu Events

ಅಂತರರಾಷ್ಟ್ರೀಯ ಬೆಳಕಿನ ವರ್ಷಾಚರಣೆಯಾ ಪ್ರಯುಕ್ತ ದಿನಾಂಕ: 2.1.2016 ರಂದು ಅರಿವು ಶಾಲೆಯ ಆವರಣದಲ್ಲಿ ‘ಪ್ರಥಮ್ – ಮೈಸೂರು’ ಇವರ ಸಹಯೋಗದೊಡನೆ ಬೆಳಕಿನ ಬಗೆಗೆ ಒಂದು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.  ಏಳನೇ ತರಗತಿಯ ಮಕ್ಕಳು ವಿಜ್ಞಾನ ಪಠ್ಯದಲ್ಲಿ ಕಲಿತ ಬೆಳಕಿನ ಸಿದ್ದಾಂತಗಳನ್ನು ಪ್ರಯೋಗಗಳ ಮೂಲಕ ತಾವು ಅರಿತು ಇತರ ಮಕ್ಕಳಿಗೂ, ಪೋಷಕರಿಗೂ ಪ್ರದರ್ಶಿಸಿ ಕಲಿಕೆಯಲ್ಲಿ ನೆರವಾದರು.  ಸರಳ ರೇಖೆಯಲ್ಲಿ ಬೆಳಕಿನ ಚಲನೆ, ವಕ್ರೀಭವನ, ಸಮಾನಾಂತರ ಪ್ರತಿಫಲನ, ಪೀನ ಮತ್ತು ನಿಮ್ನ ಮಸೂರಗಳ ಮೂಲಕ ಹಾದಾಗ ಬೆಳಕಿನ ಪಥದಲ್ಲಿ ಉಂಟಾಗುವ ಮಾರ್ಪಾಡುಗಳು, […]

More

0

ಅರಿವು ಹೊಸ ವರ್ಷಾಚರಣೆ

January 4, 2016 Arivu EventsUncategorized

ಹೊಸ ವರ್ಷಾಚರಣೆಯನ್ನು ‘ಅರಿವು ” ನಲ್ಲಿ ಡಿಸೆಂಬರ್ ೩೧ ರ  ರಾತ್ರೆ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸ್ ಭಟ್ (ಚಿ.ನಿ. ಮೈಸೂರಿನ  ರಂಗಾಯಣದ  ಸಂಗೀತ ನಿರ್ದೇಶಕರು) ನಿರ್ದೇಶನದಲ್ಲಿ ಅರಿವು ಪೋಷಕರು ರಂಗಗೀತೆಗಳನ್ನು ಹಾಡಿದರು.  ಕ್ಯಾಲೆಂಡರ್ ನ  ತಿಂಗಳುಗಳಿಗೂ, ಚಂದ್ರನ ಚಲನೆಗೂ ಇರುವ ಸಂಬಂಧದ ಬಗ್ಗೆಯೂ ಮಾಹಿತಿ ವಿನಿಮಯ ನಡೆಸಲಾಯಿತು.  ಬರ್ಟಿ ಒಲಿವೆರಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಪೋಷಕರು-ಮಕ್ಕಳು  ತಮ್ಮ ಮನೆಗಳಿಂದ ತಯಾರಿಸಿಕೊಂಡು ತಂದಿದ್ದ ಊಟವನ್ನು ಎಲ್ಲರ ಜೊತೆ ಹಂಚಿಕೊಂಡು ತಿಂದು ಸಂತೋಷಪಟ್ಟರು.  ಊಟವಾದ ಮೇಲೆ ಅನೌಪಚಾರಿಕವಾಗಿ ಮಾತುಕತೆ ನಡೆದು, ಪರಸ್ಪರ […]

More

0

« Previous Posts Next posts »

Powered by WordPress and HQ Premium Themes.
Powered By Indic IME