info@arivu.org
+91 94822-77872
ಕನ್ನಡ  English 

Activities

ಪ್ರಕೃತಿ ಅಧ್ಯಯನ – ನಾಗರಹೊಳೆ ವನ್ಯಧಾಮ

September 10, 2016 Arivu Activities

ಅರಿವು ಶಾಲೆಯ ೧ ರಿಂದ ೪ನೇ ತರಗತಿಯಲ್ಲಿ ಅಭ್ಯಸಿಸುವ ಮಕ್ಕಳು ಪ್ರಕೃತಿ ಅಧ್ಯಯನಕ್ಕಾಗಿ ಈ ಬಾರಿ ಆಯ್ದುಕೊಂಡ ಸ್ಥಳ ‘ನಾಗರಹೊಳೆ ವನ್ಯಧಾಮ’.  ೪೦ ಜನರ ತಂಡವು ದಿನಾಂಕ ೧-೨ನೇ ಸೆಪ್ಟೆಂಬರ್ ೨೦೧೬ ರಂದು ನಾಗರಹೊಳೆಗೆ ಭೇಟಿ ನೀಡಿತು.  ಮೊದಲ ದಿನ ವನ್ಯಧಾಮದಲ್ಲಿ ವಿಹರಿಸಿ ಅಲ್ಲಿಯೇ ರಾತ್ರಿ ಕಳೆದು ಎರಡನೆಯ ದಿನ ‘ಇರುಪ್ಪು ಜಲಪಾತಕ್ಕೆ’ ಭೇಟಿ ನೀಡಿ ಮೈಸೂರಿಗೆ ಹಿಂದಿರುಗುವುದು ಕಾರ್ಯಕ್ರಮದ ಸ್ಥೂಲ ರೂಪ.  ಅದರಂತೆ, ೧ನೇ ತಾರೀಖು ಅಪರಾಹ್ನದ ಹೊತ್ತಿಗೆ ನಾಗರಹೊಳೆಯಯನ್ನು ತಲುಪಿದ ತಂಡವು, ಭೋಜನದ ನಂತರ […]

More

0

ಅಣಕು ಚುನಾವಣೆ

September 2, 2016 Arivu Activities

ಬ್ರಿಟಿಷ್ ರಾಜಾಧಿಪತ್ಯದಲ್ಲಿದ್ದ ಭಾರತವು ೧೯೪೭ರಲ್ಲಿ ಸ್ವಾತಂತ್ರ್ಯ ಹೊಂದಿ ಪ್ರಜಾಪ್ರಭುತ್ವ ರಾಷ್ಟ್ರವಾಯಿತು ಮತ್ತು ನಂತರ ೧೯೫೬ರಲ್ಲಿ ತನ್ನದೇ ಸಂವಿಧಾನವನ್ನು ಹೊಂದಿ ಗಣರಾಜ್ಯವಾಯಿತು.  ಪ್ರಜಾಪ್ರಭುತ್ವದಲ್ಲಿ ಪ್ರತೀ ೫ ವರ್ಷಗಳಿಗೊಮ್ಮೆ ಪ್ರಜೆಗಳೇ ದೇಶ ಮತ್ತು ರಾಜ್ಯಗಳನ್ನಾಳುವ ಸರ್ಕಾರಗಳನ್ನು ಚುನಾವಣೆಗಳ ಮೂಲಕ ಆರಿಸುತ್ತಾರೆ ಎಂಬ ಈ ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳು ಪಠ್ಯ ಪುಸ್ತಕದಿಂದ ಅರಿತಿದ್ದರು. ಈ ಬಗೆಗೆ ಹೆಚ್ಚಿನ ತಿಳುವಳಿಕೆಗಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒಳಗೊಂಡಂತೆ ಒಂದು ಅಣಕು ಚುನಾವಣೆಯನ್ನು ಶಾಲೆಯಲ್ಲಿ ಆಯೋಜಿಸಲಾಗಿತ್ತು.  ಅಭ್ಯರ್ಥಿಗಳು ಚುನಾವಣಾ ಪ್ರಚಾರ ಕೈಗೊಂಡು ತಮಗೇ ಮತವನ್ನು ಚಲಾಯಿಸಬೇಕೆಂದು […]

More

0

ಹಾಲಿನ ಡೈರಿಗೆ ಭೇಟಿ

August 30, 2016 Arivu Activities

ದಿನಾಂಕ ೩೦ ಜೂನ್ ೨೦೧೬ ರಂದು ೩ ಮತ್ತು ೪ ನೇ ತರಗತಿಯ ಮಕ್ಕಳು ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಕರ್ನಾಟಕ ಹಾಲು ಮಹಾಮಂಡಳದ ಡೈರಿ ಗೆ ಭೇಟಿ ನೀಡಿ ಹಾಲಿನ ಸಂಗ್ರಹ, ಸಂಸ್ಕರಣೆ ಮತ್ತು ಸಂಗ್ರಹದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇದಲ್ಲದೆ ಹಾಲಿನ ಇನ್ನಿತರ ಪದಾರ್ಥಗಳಾದ ಮೊಸರು, ಕೋವ, ಮಜ್ಜಿಗೆ, ಬೆಣ್ಣೆ, ಲಸ್ಸಿ ಮತ್ತು ಪೇಡ ತಯಾರಿಕೆಯನ್ನು ಗಮನಿಸಿದರು.  ಈ ಭೇಟಿಯಿಂದ ಮಕ್ಕಳು ಹಸುವಿನಿಂದ ಕರೆದ ಹಾಲು ಹೇಗೆ ಪ್ಯಾಕೆಟ್ ಆಗಿ ತಮ್ಮ ಮನೆಗಳನ್ನು ಸೇರುತ್ತದೆ ಎಂದು […]

More

0

ಅಗ್ನಿಶಾಮಕ ಠಾಣೆಗೆ ಭೇಟಿ

August 30, 2016 Arivu Activities

ಐದು ಮತ್ತು ಆರನೇ ತರಗತಿಯ ಮಕ್ಕಳು ಮೈಸೂರಿನ ಸರಸ್ವತಿಪುರಂನಲ್ಲಿರುವ ‘ಅಗ್ನಿಶಾಮಕ ಠಾಣೆ ‘ಗೆ ದಿ: ೨೯. ೬. ೨೦೧೬ ರಂದು ಭೇಟಿ ನೀಡಿದರು. ಅಲ್ಲಿನ ಅಧಿಕಾರಿಗಳು ಠಾಣೆಯು ಹೇಗೆ ಕೆಲಸ ನಿರ್ವಹಿಸುತ್ತದೆ ಎಂದು ತಿಳಿಸಿದ್ದಲ್ಲದೆ ಬೆಂಕಿಯನ್ನು ಹೇಗೆ ನಂದಿಸಲಾಗುತ್ತದೆ ಎಂಬುದನ್ನು ಪ್ರದರ್ಶಿಸಿದರು.  ಮಕ್ಕಳ ಹಲವಾರು ಕುತೂಹಲಭರಿತ ಪ್ರಶ್ನೆಗಳಿಗೆ ಉತ್ತರಿಸಿ ಅಗ್ನಿಶಾಮಕ ದಳದ ಕೆಲಸ ಕೇವಲ ಬೆಂಕಿಯನ್ನು ನಂದಿಸುವುದಲ್ಲದೆ ಹಲವಾರು ಇತರ ತುರ್ತು ಪರಿಸ್ಥಿತಿಗಳನ್ನು (ನೀರಿನ ಅವಗಡಗಳು, ಕಟ್ಟಡ ಕುಸಿತ, ಪ್ರವಾಹ ಮತ್ತು ಇನ್ನಿತರೆ) ನಿಬಾಯಿಸುತ್ತದೆ ಎಂದು ತಿಳಿಸಿಕೊಟ್ಟರು

More

0

ರಾಷ್ತ್ರೀಯ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ ಭೇಟಿ

August 29, 2016 Arivu Activities

ದಿನಾಂಕ ೧ನೇ ಜುಲೈ ೨೦೧೬ ರಂದು ೫ ರಿಂದ ೮ನೇ ತರಗತಿಯ ಮಕ್ಕಳು ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ‘ರಾಷ್ತ್ರೀಯ ಪ್ರಾಕೃತಿಕ ಇತಿಹಾಸ ವಸ್ತುಸಂಗ್ರಹಾಲಯ’ ಕ್ಕೆ ಭೇಟಿ ನೀಡಿದರು.  ಅಲ್ಲಿನ ಮುಖ್ಯಸ್ಥರು ಮಕ್ಕಳಿಗೆ ವಸ್ತುಸಂಗ್ರಹಾಲಯದ ಉದ್ದೇಶ ಮತ್ತು ಉಪಯುಕ್ತತೆಯನ್ನು ತಿಳಿಸಿಕೊಟ್ಟರು.  ದೇಶದ ನಾಲಕ್ಕು ಭಾಗಗಳಲ್ಲಿ ಇಂತಹ ಸಂಗ್ರಹಾಲಯಗಳನ್ನು ಭಾರತ ಸರ್ಕಾರವು ಸ್ಥಾಪಿಸಿದ್ದು, ಇದು ದಕ್ಷಿಣ ಭಾರತದ ಏಕೈಕ ಕೇಂದ್ರವಾಗಿದೆ. ಭೂಮಿಯಲ್ಲಿ ಜೀವವಿಕಾಸ, ಡೈನೋಸಾರುಗಳ ಅವನತಿ, ಮತ್ತು ಪಶ್ಚಿಮ ಘಟ್ಟಗಳ ಬಗೆಗೆ ವಿಶೇಷ ಮಾಹತಿಯನ್ನು ಮಕ್ಕಳು ಅರಿತರು

More

0

ಸುತ್ತೂರು ಸೈಕಲ್ ಪ್ರವಾಸ

August 9, 2016 Arivu Activities

ದಿನಾಂಕ ೬-೭ಆಗಸ್ಟ್ ೨೦೧೬ ರಂದು ಅರಿವು ಶಾಲೆಯ ಮಕ್ಕಳು (೫-೮ ನೇ ತರಗತಿ) ಮೈಸೂರಿನಿಂದ ೩೦ ಕಿ.ಮೀ ದೂರವಿರುವ ಸುತ್ತೂರು ಕ್ಷೇತ್ರಕ್ಕೆ ಪ್ರವಾಸ ಕೈಗೊಂಡಿದ್ದರು. ಕೆಲವು ಸಾಹಸೀ ಮಕ್ಕಳು ಮತ್ತು ಶಿಕ್ಷಕರು ಸೈಕಲ್ ನಲ್ಲಿ ಪ್ರಯಾಣ ಮಾಡಿದರೆ ಮಿಕ್ಕವರು ಕಾರನ್ನು ಅವಲಂಬಿಸಿದರು.  ಶನಿವಾರ ೯.೩೦ ರ ಸಮಯಕ್ಕೆ ಹೊರಟ ತಂಡವು ಮಾರ್ಗ ಮದ್ಯೆ ಆಯರಹಳ್ಳಿಯ ಕುಸುಮಕ್ಕನ ಮನೆಯಲ್ಲಿ ಹೊಗೆಯಾಡುತ್ತಿದ್ದ ಇಡ್ಲಿಗಳನ್ನು ತಿಂದು ಊಟದ ಹೊತ್ತಿಗೆ ಸುತ್ತೂರನ್ನು ತಲುಪಿತು.  ಅಲ್ಲಿ ಶಿವರಾತ್ರೀಶ್ವರರ ಗದ್ದುಗೆ, ಕಪಿಲಾ ನದಿ ತೀರ , […]

More

0

ಗಣರಾಜ್ಯೋತ್ಸವ ಆಚರಣೆ

January 31, 2016 Arivu Activities

ಅರಿವು ಶಾಲೆಯಲ್ಲಿ ೬೭ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಪೋಷಕರಾದ ಶ್ರೀಮತಿ ಉಮಾ ರವರು ದ್ವಜಾರೋಹಣ ನೆರವೇರಿಸಿದರು ಮತ್ತು ಶಾಲೆಯ ಶಿಕ್ಷಕರಾದ ಶ್ರೀ ರಮೇಶ್ ರವರು ಗಣರಾಜ್ಯೋತ್ಸವ ಆಚರಣೆಯ ಹಿನ್ನೆಲೆಯನ್ನು ಮಕ್ಕಳಿಗೆ ಸರಳವಾಗಿ ತಿಳಿಸಿಕೊಟ್ಟರು.  ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳು ದೇಶಭಕ್ತಿಗೀತೆಗಳನ್ನು ಹಾಡಿದರು.  ಈ ಸುಸಂದರ್ಭದಲ್ಲಿ ಅರಿವು ಶಾಲೆಯ ‘ಆಶಯ ಗೀತೆಯ’ ಲೋಕಾರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.  ಗೀತೆಯ ಸಾಹಿತ್ಯ ರಚನೆಮಾಡಿದ ಕವಿ ಶ್ರೀ ಮಂಜುನಾಥ್ ಮತ್ತು ಸಂಗೀತ ಸಂಯೋಜಿಸಿ ಹಾಡಿದ ಶ್ರೀಯುತ ಹರಿಕಾವ್ಯರವರು  ಆಶಯ ಗೀತೆಯ ಪ್ರಥಮ ಪ್ರದರ್ಶನಕ್ಕೆ […]

More

0

ಮರ ವೀಕ್ಷಣಾ ಕಾರ್ಯಕ್ರಮ

May 8, 2015 Arivu ActivitiesEvents

ಅರಿವು ಪರಿಸರ ಸಂಪನ್ಮೂಲ ಕೇಂದ್ರ, ಮೈಸೂರ್ ನೇಚರ್ ವಾಚ್ ಸಹಯೋಗದಲ್ಲಿ ಮೇ ೩ ನೇ ತಾರೀಖಿನಂದು ಮೈಸೂರಿನ ಲಿಂಗಾಂಬುಧಿ ಕೆರೆ/ಅರಣ್ಯದ ಆವರಣದಲ್ಲಿ ಮರ ವೀಕ್ಷಣಾ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಎ. ಶಿವಪ್ರಕಾಶ್, ಪಿ. ಗುರುಪ್ರಸಾದ್, ಗಿರಿಜಾ, ಕೆ. ದಿನೇಶ್ ಮತ್ತು ತನುಜಾ ರವರು, ಭಾಗವಹಿಸಿದ್ದವರಿಗೆ ಮರಗಳ ಪರಿಚಯ, ಗುರುತಿಸುವಿಕೆಯ ಬಗೆ, ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಜೊತೆಗೆ ಪರಿಸರದಲ್ಲಿನ ಉಳಿದ ಜೀವಿಗಳ ಜೊತೆಗಿನ ಅವಿನಾಭಾವ ಸಂಬಂಧವನ್ನೂ ವಿವರಿಸಿದರು. ಅನೇಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಲಿಂಗಾಂಬುಧಿ […]

More

0

« Previous Posts

Powered by WordPress and HQ Premium Themes.
Powered By Indic IME