info@arivu.org
+91 94822-77872
ಕನ್ನಡ  English 

Events

ತಾಳಮದ್ದಲೆ ಕಾರ್ಯಕ್ರಮ

November 8, 2016 Arivu Events

ದಿನಾಂಕ 24.9.2016 ರಂದು ಶನಿವಾರ ಸಂಜೆ ೬ ಗಂಟೆಗೆ ದಕ್ಷಿಣ ಕನ್ನಡ ದ ಪ್ರಸಿದ್ಧ ಕಲಾವಿದರಿಂದ ’ಶ್ರೀರಾಮ ನಿರ್ಯಾಣ’ ಪ್ರಸಂಗದ ತಾಳಮದ್ದಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀರಾಮನ ಪಾತ್ರವನ್ನು ಶ್ರೀ ರಾಧಾಕೃಷ್ಣ ಕಲ್ಚಾರ್ ನಿರ್ವಹಿಸಿದರು, ದುರ್ವಾಸ ಮುನಿಯ ಪಾತ್ರವನ್ನು ಶ್ರೀ ಜಬ್ಬಾರ್ ಸಮೋ ನಿರ್ವಹಿಸಿದರು, ಶ್ರೀ ಹರೀಶ್ ಬೊಳಂತಿಮೊಗರು ಕಾಲಪುರುಷನಾದರೆ ಲಕ್ಷ್ಮಣನ ಪಾತ್ರವನ್ನು ಶ್ರೀ ರಾಮ ಜೋಯಿಸ ಬೆಳ್ಳಾರೆಯವರು ನಿರ್ವಹಿಸಿದರು. ಹಿಮ್ಮೇಳದಲ್ಲಿ ಶ್ರೀ ರಮೇಶ ಭಟ್ ಪುತ್ತೂರು ಭಾಗವತರಾಗಿದ್ದರೆ, ಮದ್ದಳೆ ನುಡಿಸಿದವರು ಶ್ರೀ ಪದ್ಯಾಣ ಶಂಕರ ನಾರಾಯಣ ಭಟ್ ರವರು. ಚಂಡೆಯನ್ನು ಶ್ರೀ ಜಗನ್ನಿವಾಸರಾವ್ ಪುತ್ತೂರು […]

More

0

ವಿಶ್ವ ಪರಿಸರ ದಿನ – ೨೦೧೬

September 11, 2016 Arivu Events

ಜೂನ್ ಮೊದಲ ಭಾನುವಾರವನ್ನು ವಿಶ್ವದಾದ್ಯಂತ ಪರಿಸರ ದಿನ ಎಂದು ಆಚರಿಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಈ ಬಾರಿ, ೦೫.೦೬.೨೦೧೬ ರ ಭಾನುವಾರದಂದು ಕೆಲವು ಪೋಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಶಾಲೆಯ ಮುಂಭಾಗದ ರಸ್ತೆ ಅಂಚಿನಲ್ಲಿ ಔಪಚಾರಿಕವಾಗಿ ಸಸಿ ನೆಡುವ ಮೂಲಕ ನಡೆಸಿಕೊಟ್ಟರು.  ನಂತರ ಶಾಲಾ ಆವರಣವು ಹಸಿರಿನಿಂದ ಕಂಗೊಳಿಸಲು ಅಗತ್ಯವಾದ ಹೂ ಗಿಡಗಳನ್ನು ಮತ್ತು ಮಕ್ಕಳಿಗೆ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಕೈತೋಟವನ್ನು ಅಭಿವೃದ್ಧಿಪಡಿಸಬೇಕೆಂದು ನಿಶ್ಚಯಿಸಲಾಯಿತು.  ದಿನಾಂಕ ೧೧.೬.೨೦೧೬ ರಂದು ಈ ಸಾಲಿನ ಪ್ರಥಮ ಪೋಷಕ-ಶಿಕ್ಷಕ […]

More

0

೭೦ನೇ ಸ್ವಾತಂತ್ರ್ಯ ದಿನಾಚರಣೆ

August 18, 2016 Arivu Events

ಅರಿವು ಶಾಲೆಯಲ್ಲಿ ದಿನಾಂಕ ೧೫.೮.೨೦೧೬ ರಂದು ಒಂದೇ ದಿವಸ ೩ ಬಾರಿ ಸ್ವಾತಂತ್ರ್ಯಾಚರಣೆ ಮಾಡಲಾಯಿತು!  ಮೊದಲು ಪೋಷಕರಾದ ಶ್ರೀಮತಿ ಸುಷ್ಮ ಮತ್ತು ಶಿಕ್ಷಕರಾದ ಶ್ರೀಮತಿ ಸುಮನಾ ರವರು ದ್ವಜಾರೋಹಣ ನೆರೆವೇರಿಸಿ ೭೦ನೇ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರೆ, ಮಕ್ಕಳು ಅಭಿನಯಿಸಿದ ‘ಸ್ವಾತಂತ್ರ್ಯೋತ್ಸವ’ ಎಂಬ ನಾಟಕದಲ್ಲಿ ಶಾಸಕಿ ಪಾತ್ರಧಾರಿಯಾದ ಕು. ಅದಿತಿಯವರು ಮತ್ತೊಮ್ಮೆ  ದ್ವಜಾರೋಹಣ ನೆರೆವೇರಿಸದರು!  ಇದು ಭಾರತ ದೇಶದ ಸ್ವಾತಂತ್ರ್ಯಾಚರಣೆಯಾದರೆ, ಜರ್ಮನಿಯಿಂದ ಆಗಮಿಸಿರುವ ವಿದ್ಯಾರ್ಥಿ ಸ್ವಯಂಸೇವಕರಾದ  ಟಿಮ್ ಮತ್ತು ಫ್ಲಿಫ್ಸ್ ರವರು ಹೇಗೆ ಜರ್ಮನ್ ನಾಗರೀಕರು ಬರ್ಲಿನ್ […]

More

0

ಅರಿವು ಹಬ್ಬ 2016

April 27, 2016 Arivu Events

ದಿನಾಂಕ 2 ಏಪ್ರಿಲ್ 2016 ರಂದು ವಾರ್ಷಿಕ ಆಚರಣೆಯಾದ ‘ಅರಿವು ಹಬ್ಬವನ್ನು’ ವಿವಿದ ಪಾರಂಪರಿಕ ಮತ್ತು ಜಾನಪದ ಕಲೆಗಳನ್ನು ಪೋಷಕರು ಮತ್ತು ಶಿಕ್ಷಕರ ಕಲಾ ಪ್ರದರ್ಶನದ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಈ ದಿನವನ್ನು ಕೇವಲ ಸಂಭ್ರಮಾಚರಣೆಗೆ ಸೀಮಿತವಾಗಿಸದೆ, ಹೊಸ ಕಟ್ಟಡದ ಉದ್ಘಾಟನೆ, ಗಂಥಾಲಯದ ಲೋಕಾರ್ಪಣೆ, ಶಾಲೆಯ ಏಳಿಗೆಗಾಗಿ ದುಡಿದ ಸಹೃದಯರಿಗೆ ಕೃತಜ್ಙತೆ ಅರ್ಪಿಸುವ ಮತ್ತು ಮಕ್ಕಳಿಗೆ ನೆನಪಿನ ಕಾಣಿಕೆ ಸಲ್ಲಿಸುವ ಕಾರ್ಯವನ್ನೂ ನೆರವೇರಿಸಲಾಯಿತು. ಶ್ರೀಮತಿ ರೇವತಿ ಶರ್ಮ ಹಾಗು ಶ್ರೀಮತಿ ಸೌಮ್ಯ ರವರ “ಕಾಯೋ ಶ್ರೀ ಗೌರಿ” […]

More

0

ವಿಷಯಾಧಾರಿತ ಕಲಿಕೆ ‘ಸೈಕಲ್’ – ಅನುಭವ ಹಂಚಿಕೆ

February 11, 2016 Arivu Events

ದಿನಾಂಕ 30.1.2016 ರ ಶನಿವಾರದಂದು “ವಿಷಯಾಧಾರಿತ ಕಲಿಕೆ ‘ಸೈಕಲ್’ – ಅನುಭವ ಹಂಚಿಕೆ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಈ ಕಲಿಕಾ ಪ್ರದರ್ಶನವನ್ನು ಎರಡು ಭಾಗಗಳಾಗಿ ವಿಂಗಡಿಸಿ, ಮೊದಲ ಭಾಗವಾಗಿ ಸಂಜೆ 3.30 ರಿಂದ 6 ರವರೆಗೆ, ಈ 5 ತಿಂಗಳಲ್ಲಿ ಮಕ್ಕಳು ‘ಸೈಕಲ್’ ಕೇಂದ್ರವಾಗಿಟ್ಟುಕೊಂಡು ತಾವು ಕಲಿತ ‘ಇತಿಹಾಸ, ಗಣಿತ, ವಿಜ್ಞಾನ, ಭೂಗೋಳ ಮತ್ತು ಇತರ ವಿಷಯಗಳನ್ನು’ ಪ್ರದರ್ಶಿಕೆಗಳ ಮೂಲಕ ಪೋಷಕರು ಮತ್ತು ಅತಿಥಿಗಳಿಗೆ ವಿವರಿಸಿದರು.  ಮಕ್ಕಳೇ ಕನ್ನಡ/ಇಂಗ್ಲೀಶ್ ಭಾಷೆಯಲ್ಲಿ ರಚಿಸಿದ ಸೈಕಲ್ ಕೇಂದ್ರಿತ ಕವಿತೆಗಳು, ಕತೆಗಳು ಸ್ವಾನುಭವಗಳು ಮತ್ತು […]

More

0

ಅಂತರರಾಷ್ಟ್ರೀಯ ಬೆಳಕಿನ ವರ್ಷಾಚರಣೆ

January 5, 2016 Arivu Events

ಅಂತರರಾಷ್ಟ್ರೀಯ ಬೆಳಕಿನ ವರ್ಷಾಚರಣೆಯಾ ಪ್ರಯುಕ್ತ ದಿನಾಂಕ: 2.1.2016 ರಂದು ಅರಿವು ಶಾಲೆಯ ಆವರಣದಲ್ಲಿ ‘ಪ್ರಥಮ್ – ಮೈಸೂರು’ ಇವರ ಸಹಯೋಗದೊಡನೆ ಬೆಳಕಿನ ಬಗೆಗೆ ಒಂದು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.  ಏಳನೇ ತರಗತಿಯ ಮಕ್ಕಳು ವಿಜ್ಞಾನ ಪಠ್ಯದಲ್ಲಿ ಕಲಿತ ಬೆಳಕಿನ ಸಿದ್ದಾಂತಗಳನ್ನು ಪ್ರಯೋಗಗಳ ಮೂಲಕ ತಾವು ಅರಿತು ಇತರ ಮಕ್ಕಳಿಗೂ, ಪೋಷಕರಿಗೂ ಪ್ರದರ್ಶಿಸಿ ಕಲಿಕೆಯಲ್ಲಿ ನೆರವಾದರು.  ಸರಳ ರೇಖೆಯಲ್ಲಿ ಬೆಳಕಿನ ಚಲನೆ, ವಕ್ರೀಭವನ, ಸಮಾನಾಂತರ ಪ್ರತಿಫಲನ, ಪೀನ ಮತ್ತು ನಿಮ್ನ ಮಸೂರಗಳ ಮೂಲಕ ಹಾದಾಗ ಬೆಳಕಿನ ಪಥದಲ್ಲಿ ಉಂಟಾಗುವ ಮಾರ್ಪಾಡುಗಳು, […]

More

0

ಅರಿವು ಹೊಸ ವರ್ಷಾಚರಣೆ

January 4, 2016 Arivu EventsUncategorized

ಹೊಸ ವರ್ಷಾಚರಣೆಯನ್ನು ‘ಅರಿವು ” ನಲ್ಲಿ ಡಿಸೆಂಬರ್ ೩೧ ರ  ರಾತ್ರೆ ಹಮ್ಮಿಕೊಳ್ಳಲಾಗಿತ್ತು. ಶ್ರೀನಿವಾಸ್ ಭಟ್ (ಚಿ.ನಿ. ಮೈಸೂರಿನ  ರಂಗಾಯಣದ  ಸಂಗೀತ ನಿರ್ದೇಶಕರು) ನಿರ್ದೇಶನದಲ್ಲಿ ಅರಿವು ಪೋಷಕರು ರಂಗಗೀತೆಗಳನ್ನು ಹಾಡಿದರು.  ಕ್ಯಾಲೆಂಡರ್ ನ  ತಿಂಗಳುಗಳಿಗೂ, ಚಂದ್ರನ ಚಲನೆಗೂ ಇರುವ ಸಂಬಂಧದ ಬಗ್ಗೆಯೂ ಮಾಹಿತಿ ವಿನಿಮಯ ನಡೆಸಲಾಯಿತು.  ಬರ್ಟಿ ಒಲಿವೆರಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಪೋಷಕರು-ಮಕ್ಕಳು  ತಮ್ಮ ಮನೆಗಳಿಂದ ತಯಾರಿಸಿಕೊಂಡು ತಂದಿದ್ದ ಊಟವನ್ನು ಎಲ್ಲರ ಜೊತೆ ಹಂಚಿಕೊಂಡು ತಿಂದು ಸಂತೋಷಪಟ್ಟರು.  ಊಟವಾದ ಮೇಲೆ ಅನೌಪಚಾರಿಕವಾಗಿ ಮಾತುಕತೆ ನಡೆದು, ಪರಸ್ಪರ […]

More

0

ಖಗೋಳ ವಿಜ್ಞ್ಯಾನ ಕಾರ್ಯಾಗಾರ

July 13, 2015 Arivu EventsUncategorized

ಖಗೋಳ ವಿಜ್ಞ್ಯಾನ ಕಾರ್ಯಾಗಾರ ದಿನಾಂಕ ೧೩ನೆ ಜುಲೈ ೨೦೧೬ ರ ಸೋಮವಾರದಂದು ಅರಿವು ಶಾಲೆಯಲ್ಲಿ ಖಗೋಳ ವಿಜ್ಞ್ಯಾನ ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು. ತುಮಕೂರಿನ ಸರ್ಕಾರಿ ಸಂಯುಕ್ತ ಪ್ರೌಡ ಶಾಲೆಯಲ್ಲಿ ಶಿಕ್ಷಕರಾಗಿರುವ ಶ್ರೀ. ರಾಮಸ್ವಾಮಿಯವರು ಕಾರ್ಯಾಗಾರವನ್ನು ನಡೆಸಿಕೊಟ್ಟರು. ತಾವೇ ತಯಾರಿಸಿದ ಮಾದರಿಗಳನ್ನು ಉಪಯೋಗಿಸಿಕೊಂಡು ಭೂಮಿಯ ದೈನಂದಿನ ಚಲನೆ, ವಾರ್ಷಿಕ ಚಲನೆ, ಋತುಮಾನ, ಚಂದ್ರನ ಚಲನೆ, ಚಂದ್ರನ ಕಲೆಗಳು, ಶುಕ್ರನ ಹಿಮ್ಮುಕ ಚಲನೆ, ಬುಧ ಮತ್ತು ಮಂಗಳ ಗ್ರಹದ ಭ್ರಮಾಣಾವಧಿ, ಸೂರ್ಯ ಮತ್ತು ಚಂದ್ರ ಗ್ರಹಣದ ಪ್ರಾತ್ಯಕ್ಷಿಕೆ ಯನ್ನು ನೀಡಿದರು. ಈ […]

More

0

« Previous Posts

Powered by WordPress and HQ Premium Themes.
Powered By Indic IME