info@arivu.org
+91 94822-77872
ಕನ್ನಡ  English 

General

ಚಲನ ಚಿತ್ರ ನಿರ್ದೇಶಕ ಶ್ರೀ ಪಿ.ಶೇಷಾದ್ರಿಯವರೊಡನೆ ಮಕ್ಕಳ ಸಂವಾದ

September 30, 2016 Arivu General

2004-05ನೇ ಸಾಲಿನಲ್ಲಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ಬೇರು”  6ನೇ ತರಗತಿ ವಿಧ್ಯಾರ್ಥಿಗಳಿಗೆ ಪಠ್ಯವಾಗಿದೆ.  ಭ್ರಷ್ಟ ವ್ಯವಸ್ಥೆಯಿಂದ ತನ್ನ ಮನೆಯನ್ನು ಮತ್ತು ತನ್ನ ಪ್ರಾಣವನ್ನೂ ಕಳೆದುಕೊಳ್ಳುವ ಬಡ ಗೊರವಯ್ಯನ ಕಥೆಯಿರುವ ಚಿತ್ರವನ್ನು ವೀಕ್ಷಿಸಿದ್ದ ಮಕ್ಕಳ ಮನದಲ್ಲಿ ಹಲವಾರು ಸಂಶಯಗಳು ಕುಡಿಯೊಡೆದಿದ್ದವು. ಇವನ್ನು ನಿವಾರಿಸಲೋ ಎಂಬಂತೆ,ಇದೇ ಸಂಧರ್ಭದಲ್ಲಿ ತಮ್ಮ ಕಾರ್ಯನಿಮಿತ್ತ ಮೈಸೂರಿಗೆ ಬಂದಿದ್ದ  ಚಿತ್ರದ ನಿರ್ದೇಶಕರಾದ ಶ್ರೀ ಪಿ.ಶೇಷಾದ್ರಿಯವರು ದಿನಾಂಕ 18.08.2016 ರಂದು  ಶಾಲೆಗೆ ಭೇಟಿ ನೀಡಿದರು.  ಮಕ್ಕಳೊಡನೆ ನಿರ್ದೇಶಕರ ಸಂವಾದವನ್ನು ಶಾಲೆಯ ಲತಾಮಂಟಪದಲ್ಲಿ  […]

More

0

“ಅರಿವು ಶಾಲೆ”ಯಲ್ಲಿ ಯಕ್ಷಗಾನ -ತಾಳಮದ್ದಲೆ ಕಾರ್ಯಕ್ರಮ

December 23, 2014 Arivu EventsGeneral

ತಾ: 21ನೆ ಭಾನುವಾರ, ಮೈಸೂರಿನ ಲಿಂಗಾಂಬುಧಿಪಾಳ್ಯದಲ್ಲಿರುವನಡೆಯಿತು. (ಚಿತ್ರ ಲಗತ್ತಿಸಿದೆ ) ಪ್ರಖ್ಯಾತ ಅರ್ಥದಾರಿ ಗಳಾದ ಕುಂಬ್ಳೆ ಸುಂದರರಾವ್, ಪ್ರಭಾಕರ ಜೋಷಿ, ರಾಧಾಕೃಷ್ಣ ಕಲ್ಚಾರ್ , ರಾಮಾ ಜೋಯಿಸ್ , ಕೃಷ್ಣಮಾಚಾರ್, ಪಾತ್ರಧಾರಿಗಳಾಗಿದ್ದರು. ಸುಬ್ರಾಯ ಸಂಪಾಜೆ ಭಾಗವತಿಕೆಯಿಂದ ತಾಳಮದ್ದಲೆ ಕಳೆಕಟ್ಟಿತು. ಮದ್ದಲೆಯಲ್ಲಿ ಕೃಷ್ಣಪ್ರಸಾದ್ ಉಳಿತ್ತಾಯ ಮತ್ತು ಚಂಡೆಯಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ ಸಹಕಾರ ನೀಡಿದರು. ಅರಿವು ಸದಸ್ಯರು ,ಶಿಕ್ಷಕರು, ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರು ಕಾರ್ಯಕ್ರಮವನ್ನು ಅಸ್ವಾದಿಸಿದರು.

More

0

ಅರಿವು ತಂಡದಿಂದ ಪೂರ್ಣ ಶಾಲೆಗೆ ಭೇಟಿ

November 23, 2014 Arivu GeneralParents

ಪೂರ್ಣ ಶಾಲೆಯಲ್ಲಿ ಕಳೆದ ಕೆಲ ಸಮಯ ಮಕ್ಕಳ ದಿನದಂದು ದಿಡೀರ್ ಎಂದು ಬೆಂಗಳೂರಿನ ಈ ಶಾಲೆಗೆ ಭೇಟಿ ನೀಡುವ ಒಂದು ಸದವಕಾಶ ಅರಿವು ಕುಟುಂಬದಿಂದ ಒದಗಿಬಂತು. ಹಿಂದಿನ ದಿನ ರಾತ್ರಿ ಅಂತರ್ಜಾಲದಲ್ಲಿ ಜಾಲಾಡಿದಾಗಲೇ ನಮ್ಮ ರಾಜಧಾನಿಯಲ್ಲಿ ಇಂತಹ ಒಂದು ಅಪೂರ್ವ ಶಾಲೆಯಿರುವುದು ತಿಳಿದಿದ್ದು, ಅದೂ ಯಲಹಂಕದ ಪ್ರತಿಷ್ಠಿತ ಡೆಲ್ಲಿ ಪಬ್ಲಿಕ್ ಶಾಲೆಯ ಸೆರೆಗಿನಲ್ಲೇ ಎಂದರೇ ಆಶ್ಚರ್ಯವೇ ಸರಿ! ಸದಾ ಐ ಟಿ / ಬಿ ಟಿ ಯಲ್ಲೇ ಮುಳುಗಿ ಅಂತರರಾಷ್ಟ್ರೀಯ ಶಾಲೆಗಳ ಪೋಷಕರಾಗಲು ಮುಗಿಬೀಳುವ ಬೆಂಗಳೂರಿಗರಿಗೆ ‘ಪೂರ್ಣ’ದಂತಹ […]

More

0

Dr. Pradeep and Dr. Sarayu Visits arivu school

June 6, 2014 Arivu ActivitiesEventsGeneralSchool

Dr. Pradeep (Phd., in Maths from IISc., Bangalore) and his wife Dr. Sarayu (Phd., in Stastistics), who stays in their farm in a village near Gubbi, Tumkur district, Karnataka state, visited Arivu on 6th June, 2014. with their children. Pradeep and his family believes in living a simple life with minimal carbron foot print.  Hence […]

More

0

ಅರಿವು ಪೋಷಕ/ವಿದ್ಯಾರ್ಥಿ/ಶಿಕ್ಷಕ/ಸಂಪನ್ಮೂಲ ವ್ಯಕ್ತಿಗಳ ಪ್ರವಾಸ

February 11, 2014 Arivu ActivitiesGeneral

ಮೈಸೂರಿನಿಂದ ಸುಮಾರು ೭೦ ಕಿ.ಮೀ. ದೂರವಿರುವ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿರುವ ,ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಅರಿವು ಬಳಗದ ಪೋಷಕ/ವಿದ್ಯಾರ್ಥಿ/ಶಿಕ್ಷಕ/ಸಂಪನ್ಮೂಲ ವ್ಯಕ್ತಿಗಳ ಪ್ರವಾಸವನ್ನು ತಾ: ೯/೨/೧೪ ರ ಭಾನುವಾರದಂದು ಆಯೋಜಿಸಲಾಗಿತ್ತು. ಬೆಳಗಿನ ತಿಂಡಿಯನ್ನು ಶಾಲೆಯ ಶಿಕ್ಷಕಿ ಲಕ್ಷ್ಮಿ ಯವರ ಪಿರಿಯಾಪಟ್ಟಣದಲ್ಲಿದ್ದ ೨೦೦ ವರ್ಷ ಹಳೆಯ ಸುಮಾರು ೧೦೦ ಜನ ತಂಗಬಹುದಾದಷ್ಟು ದೊಡ್ಡದಾದ ತೊಟ್ಟಿ ಮನೆಯಲ್ಲಿ, ಮನೆಯ ಮಧ್ಯದ ತೊಟ್ಟಿಯ ಸುತ್ತ ಕೂತು ತಿಂದೆವು. ಬಳಿಕ ಸುಮಾರು ೩,೨೦೦ ಮೆಟ್ಟಿಲುಗಳಿದ್ದ ಬೆಟ್ಟದಪುರದ  ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟವನ್ನು […]

More

0

ಅರಿವು ಶಾಲೆಯಲ್ಲಿ ವಿಮಾನ ಹಾರಿತು:)

June 28, 2013 Arivu ActivitiesGeneral

ಅರಿವು ಶಾಲೆಯಲ್ಲಿ ವಿಮಾನ ಹಾರಿತು:) ಕಳೆದ ಗುರುವಾರ (೨೦  ನೇ ಜೂನ್ )ದಂದು  ನಮ್ಮ ಶಾಲೆಯಲ್ಲಿ ಆಟಿಕೆಯ ವಿಮಾನ ಹಾರಿಸಿದೆವು . ಅರಿವು ಬಳಗದ ಹಿತೈಷಿ ಮತ್ತು ಕಲಾವಿದ ಮಿತ್ರರಾದ ಶ್ರೀ. ಚೆಲುವರಾಜ್ ರವರು ಶಾಲೆಗೆಂತಲೇ ಹೊಸದಾಗಿ ಕೊಂಡು ತಂದ ೨ ವಿಮಾನಗಳ ಬಿಡಿ ಭಾಗಗಳನ್ನು , ಮಕ್ಕಳ ಮುಂದೆಯೇ ಜೋಡಿಸಿ ಹಾರಿಸಿದರು.  ಸುಮಾರು ೪೫ ನಿಮಿಷ ಇಡೀ ಶಾಲೆಯಲ್ಲಿ ವಿಮಾನ ಜೋಡಿಸುವಾಗ ಕುತೂಹಲ, ಹಾರಿದಾಗ ಸಂತೋಷ, ರೋಮಾಂಚನದ ವಾತಾವರಣ ಉಂಟಾಗಿತ್ತು. ಮಕ್ಕಳು ಮತ್ತು  ಶಿಕ್ಷಕರು ತಮ್ಮ […]

More

0

ಅರಿವು ಶಾಲೆ ರಜೆ

October 17, 2012 Arivu General

ಅರಿವು ಶಾಲೆಗೆ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ ೩೦ ರ ತನಕ ರಜೆ ಇರುತ್ತದೆ.  ನಿಮಗೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು.

More

0

ಅರಿವು ನಲ್ಲಿ ಅನುವಾದ ಕಾರ್ಯಾಗಾರ

October 8, 2012 Arivu GeneralMedia

ಒಂದು ಅನುವಾದ ಕಾರ್ಯಾಗಾರ ಶ್ರೀ ಸುದರ್ಶನ ಮತ್ತು ಡಾ Gananath ಮೂಲಕ ಅರಿವು ನಲ್ಲಿ ನಡೆಸಲಾಯಿತು. ಕಾರ್ಯಾಗಾರದಲ್ಲಿ ಪ್ರಮುಖವಾಗಿ ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ಲೇಖನಗಳ ಅನುವಾದ ವಿವಿಧ ಅಂಶಗಳ ಮೇಲೆ ಕೇಂದ್ರೀಕೃತವಾಗಿದೆ. Google ಅನುವಾದ ನಂತಹ Latests ಉಪಕರಣಗಳು ಸಹ ಅನುವಾದ ಒಂದು ಚಿಕಿತ್ಸಾ ಪರಿಚಯಿಸಲಾಯಿತು. ಇದು ವಿವಿಧ ಹಿನ್ನೆಲೆಯಲ್ಲಿ ಸುಮಾರು 15 ಸ್ಪರ್ಧಿಗಳು ಪಾಲ್ಗೊಂಡರು.

More

« Previous Posts

Powered by WordPress and HQ Premium Themes.
Powered By Indic IME