info@arivu.org
+91 94822-77872
ಕನ್ನಡ  English 

ಪರಿಸರ

ಪ್ರಪಂಚವೆಲ್ಲಾ ಹವಾಮಾನ ಬದಲಾವಣೆ ಮತ್ತು ತಾಪಮಾನ ಏರಿಕೆಯ ಬಗ್ಗೆ ಜಿಜ್ಞಾಸೆಯಲ್ಲಿ ತೊಡಗಿದ್ದರೆ, ‘ಅರಿವು’ ಅದರ ಬಗ್ಗೆ ಒಂದು ನಿಲುವು ತೆಳೆದಿದೆ. ನಾವು ನಮ್ಮ ಪರಿಸರವನ್ನು ರಕ್ಷಿಸಿ, ಪೋಷಿಸಿ, ಪುನಶ್ಚೇತನಗೊಳಿಸಲು ಪ್ರಯತ್ನಿಸುತ್ತೇವೆ. ನಮಗೆ ಶಿಕ್ಷಣ ಮತ್ತು ಪರಿಸರ ನಮಗೆ ಅತಿ ಮುಖ್ಯವಾದವು.

ಪರಿಸರ ನಮಗೇಕೆ ಕೇಂದ್ರ ಬಿಂದು?
ನಮ್ಮ ದಿನನಿತ್ಯದ ಜೀವನ ಪರಿಸರ ಸ್ನೇಹಿ ಅಲ್ಲ ಎಂದು ತಿಳಿಯುವುದಕ್ಕೆ ಒಂದು ವೈಜ್ಞಾನಿಕ ವಿವರಣೆಯ ಅವಶ್ಯಕತೆಯೇನೂ ಬೇಕಿಲ್ಲ. ನಮ್ಮ ಪರಿಹಾರಗಳು ಗಿರಾಕಿಯ ಹಿತರಕ್ಷಣೆಗಳನ್ನು ಕಾಯುವ ನಿಯಮಗಳ ಮೇಲೆ ಕಟ್ಟಲ್ಪಟ್ಟಿವೆ. ಇವು ಖಂಡಿತ ಸಮರ್ಥನೀಯವಲ್ಲ. ನಾವು ಇಂಧನಗಳನ್ನು ಬಳಸುವ ರೀತಿಯಿಂದ ಹಿಡಿದು ಇಡೀ ಜೀವ ಸಂಕುಲವನ್ನೇ ಕದಡುವ ನಮ್ಮ ಚಟುವಟಿಕೆಗಳವರೆಗೂ ನಾವು ಈ ಭೂಮಿಯ ಜವಾಬ್ದಾರೀ ನಿವಾಸಿಗಳಂತೆ ವರ್ತಿಸುತ್ತಿಲ್ಲ.

ನಮ್ಮಿಂದ ಆಗಿರುವ ಪರಿಸರ ಹಾನಿ ಎಷ್ಟು ಎಂಬುದರ ಬಗ್ಗೆ ಹಲವು ಅಭಿಪ್ರಾಯಗಳು ಇರಬಹುದೇನೋ. ಆದರೆ ಅದರಿಂದ, ಸಾಮಾಜಿಕ ಮತ್ತು ಆರ್ಥಿಕ ನೆಲೆಗಟ್ಟುಗಳಿಗೆ ಬಿದ್ದಿರುವ ಹೊಡೆತದ ಬಗ್ಗೆ ಅನುಮಾನವೇ ಇಲ್ಲ.

ಅರಿವು ಹೇಗೆ ಪರಿಸರದ ಬಗ್ಗೆ ಕಾಳಜಿ ವಹಿಸುತ್ತದೆ?

ನಮ್ಮ ಎಲ್ಲ ನಿರ್ಧಾರಗಳ ಕೇಂದ್ರ ಬಿಂದು ಪರಿಸರ. ನಮ್ಮ ಚಟುವಟಿಕೆಗಳಿಂದ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ನಮಗೆ ಅರಿವಿದೆ. ಅಡ್ಡ ಪರಿಣಾಮಗಳನ್ನು ತಗ್ಗಿಸಲು ಮತ್ತು ತಟಸ್ಥಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಮ್ಮ ಕಟ್ಟಡಗಳಿಂದ ಹಿಡಿದು ವಿದ್ಯಾಭ್ಯಾಸ ಕ್ರಮದವರೆಗೆ ಎಲ್ಲದರಲ್ಲೂ ಪರಿಸರ ಕಾಳಜಿ ಇದ್ದೇ ಇರುತ್ತದೆ. ನಮ್ಮ ಕಟ್ಟಡಗಳು ಪರಿಸರ ಸ್ನೇಹಿ ವಸ್ತುಗಳಿಂದ ಕಟ್ಟಲ್ಪಟ್ಟಿವೆ. ನಾವು ಮಳೆ ನೀರನ್ನು ಸಂಗ್ರಹಿಸಿ ಅದನ್ನು ಬಳಸುತ್ತೇವೆ. ನಮ್ಮ ಶಾಲೆಯಲ್ಲಿ ಫ್ಯಾನ್ ಮತ್ತು ವಿದ್ಯುದ್ದೀಪಗಳನ್ನು ಉಪಯೋಗಿಸುವ ಅವಶ್ಯಕತೆ ಬರುವುದಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಹಜವಾಗಿ ಬೆಳೆಯುವಂತಹ ಸಸ್ಯಗಳನ್ನು ಬೆಳೆಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಶಾಲೆಯ ಮಕ್ಕಳು ಮತ್ತು ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು, ಅರಿವು ಹಲವು ಕಾರ್ಯಕ್ರಮಗಳನ್ನು ನಡೆಸುತ್ತದೆ.


Powered by WordPress and HQ Premium Themes.
Powered By Indic IME