info@arivu.org
+91 94822-77872
ಕನ್ನಡ  English 

ಚಟುವಟಿಕೆಗಳು


ಈಗಾಗಲೇ ನಡೆಸಿರುವ ಕಾರ್ಯಕ್ರಮಗಳು

1. ಮರ, ಚಿಟ್ಟೆ, ಪಕ್ಷಿ, ಹಾವು ವೀಕ್ಷಣೆ

2. ತ್ರೈಮಾಸಿಕ ಕಲಿಕಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು

3. ತಾಳ ಮದ್ದಳೆ, ಜಾನಪದ ಇಂದ್ರಜಾಲ, ತಮಟೆ, ಪೂಜಾ ಕುಣಿತ, ಶಾಸ್ತ್ರೀಯ ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು

4. ಶೈಕ್ಷಣಿಕ ಕಾರ್ಯಗಾರ ಮತ್ತು ಚರ್ಚೆಗಳು

ಯಾರು ಭಾಗವಹಿಸಬಹುದು?

ಎಲ್ಲರೂ! ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ನೊಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲದಿದ್ದರೂ, ತಮ್ಮ ಬರುವಕೆಯ ಬಗ್ಗೆ ನಮಗೆ ಫೋನ್ ಅಥವಾ ಇಮೇಲ್ ಮೂಲಕ ನಮಗೆ ತಿಳಿಸಿದರೆ ಅನುಕೂಲ. ಎಷ್ಟು ಜನ ಬರುತ್ತಿದ್ದಾರೆ ಎಂಬ ಅಂದಾಜಿದ್ದರೆ ನಮಗೆ ಕಾರ್ಯಕ್ರಮವನ್ನು ಆಯೋಜಿಸಲು ಅನುಕೂಲವಾಗುತ್ತದೆ.

ಶುಲ್ಕ ಎಷ್ಟು?

ಶುಲ್ಕ ಇಲ್ಲ! ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಜ್ಞಾನದ ಮೂಲಕ ಜನರಲ್ಲಿ ಪರಿಸರ ಪ್ರೇಮವನ್ನು ಹುಟ್ಟು ಹಾಕುವ ಉದ್ದೇಶದಿಂದ ನಾವು ಕಾರ್ಯಾಗಾರಗಳನ್ನು ನಡೆಸುತ್ತೇವೆ. ಅವುಗಳಿಗೆ ಯಾವ ಶುಲ್ಕವನ್ನೂ ವಿಧಿಸುವುದಿಲ್ಲ.

ನಿಮಗೆ ಪರಿಸರಕ್ಕೆ ಸಂಬಂಧಿಸಿದ ಕಾರ್ಯಾಗಾರ ಅಥವಾ ಸಮ್ಮೇಳನ ನಡೆಸುವ ಯೋಜನೆ ಇದ್ದರೆ ನಮ್ಮನ್ನು ಸಂಪರ್ಕಿಸಿ. ನಾವು ಸಂತೋಷದಿಂದ ಅಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಆಯೋಜಿಸಿಕೊಡುತ್ತೇವೆ.


Powered by WordPress and HQ Premium Themes.
Powered By Indic IME