ಈಗಾಗಲೇ ನಡೆಸಿರುವ ಕಾರ್ಯಕ್ರಮಗಳು

ಮರ, ಚಿಟ್ಟೆ, ಪಕ್ಷಿ ಮತ್ತು ಹಾವು ವೀಕ್ಷಣೆ.

ಅನುಭವ ಹಂಚಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು . ತಾಳ ಮದ್ದಳೆ, ಜಾನಪದ ಇಂದ್ರಜಾಲ, ತಮಟೆ, ಪೂಜಾ ಕುಣಿತ, ಶಾಸ್ತ್ರೀಯ ಸಂಗೀತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು.

ಶೈಕ್ಷಣಿಕ ಕಾರ್ಯಗಾರ ಮತ್ತು ಚರ್ಚೆಗಳು

ಪರಿಸರ ಮತ್ತು ಜಾನಪದಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಸಾಕ್ಷ್ಯಚಿತ್ರಗಳ ನಿರ್ಮಾಣ.

ಯಾರು ಭಾಗವಹಿಸಬಹುದು?
ವಿಷಯದಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಭಾಗವಹಿಸಬಹುದು. ಭಾಗವಹಿಸಲು ಇಚ್ಚಿಸುವವರು ಮುಂಚಿತವಾಗಿ ನೊಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲದಿದ್ದರೂ, ತಮ್ಮ ಬರುವಕೆಯ ಬಗ್ಗೆ ನಮಗೆ ಫೋನ್ ಅಥವಾ ಇಮೇಲ್ ಮೂಲಕ ನಮಗೆ ತಿಳಿಸಿದರೆ ಅನುಕೂಲ. ಎಷ್ಟು ಜನ ಬರುತ್ತಿದ್ದಾರೆ ಎಂಬ ಅಂದಾಜಿದ್ದರೆ ನಮಗೆ ಕಾರ್ಯಕ್ರಮವನ್ನು ಆಯೋಜಿಸಲು ಅನುಕೂಲವಾಗುತ್ತದೆ.

ಶುಲ್ಕ ಎಷ್ಟು?
ವೈಜ್ಞಾನಿಕ ಮತ್ತು ಸಾಂಪ್ರದಾಯಿಕ ಜ್ಞಾನದ ಮೂಲಕ ಜನರಲ್ಲಿ ಪರಿಸರ ಪ್ರೇಮವನ್ನು ಹುಟ್ಟು ಹಾಕುವ ಉದ್ದೇಶದಿಂದ ನಾವು ಕಾರ್ಯಾಗಾರಗಳನ್ನು ನಡೆಸುತ್ತೇವೆ. ಹಾಗಾಗಿ ಸಾಮಾನ್ಯವಾಗಿ ಯಾವುದೇ ಶುಲ್ಕವಿರುವುದಿಲ್ಲ. ಹೆಚ್ಚು ವೆಚ್ಚವಾಗುವ ಸಂಭವವಿದ್ದಾಗ ಮಾತ್ರ, ಆಗುವ ಖರ್ಚನ್ನು ಭಾಗವಹಿಸಿದವರು ಹಂಚಿಕೊಳ್ಳಬೇಕಾಗುತ್ತದೆ.

ನಿಮಗೆ ಪರಿಸರಕ್ಕೆ ಸಂಬಂಧಿಸಿದ ಕಾರ್ಯಾಗಾರ ಅಥವಾ ಸಮ್ಮೇಳನ ನಡೆಸುವ ಯೋಜನೆ ಇದ್ದರೆ ನಮ್ಮನ್ನು ಸಂಪರ್ಕಿಸಿ. ನಾವು ಸಂತೋಷದಿಂದ ಅಂತಹ ಕಾರ್ಯಕ್ರಮಗಳನ್ನು ನಿಮಗಾಗಿ ಆಯೋಜಿಸಿಕೊಡುತ್ತೇವೆ.

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.