ಪ್ರಸಕ್ತ ಚಾಲ್ತಿಯಲ್ಲಿರುವ ಮೂಲತಃ ಬ್ರಿಟಿಷ್ ಶಿಕ್ಷಣ ಪದ್ಧತಿಯ ಮೇಲಿನ ಕಳವಳ ಮತ್ತು ನಿರಾಶೆ ಹೊಸದೇನಲ್ಲ. 1908ರಲ್ಲೇ ಗಾಂಧಿಜಿಯವರು ಈ ಪದ್ಧತಿಯ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ಕೊಟ್ಟಿದ್ದರು.

ಈ ಕಾರ್ಖಾನೆ ರೀತಿಯ ಶಿಕ್ಷಣ ಪದ್ಧತಿಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಅರಿವಿದ್ದ ಕೆಲವು ಸ್ನೇಹಿತರು, ಟೀ ಕುಡಿಯುತ್ತಾ , ತಾವು ಹಿಂದಿನ ದಿನ ವೀಕ್ಷಿಸಿದ್ದ 'ತಾರೆ ಜಮೇನ್ ಪರ್' ಚಿತ್ರದ ಕುರಿತು ಹರಟುತ್ತಿದ್ದರು. ಆಗಲೇ ಅವರಿಗೆ ಅರಿವು ಶಾಲೆಯನ್ನು ಶುರು ಮಾಡುವ ಯೋಚನೆ ಬಂದದ್ದು.

ಅಂದಿನಿಂದ ಮತ್ತೂ ಹಲವಾರು ಸ್ನೇಹಿತರು ಕೈಜೋಡಿಸಿ 'ಅರಿವು' ಇಂದಿರುವ ಸ್ಥಿತಿಗೆ ತಂದಿದ್ದಾರೆ. ಕೆಲವರು ಹೊಸ ಯೋಚನೆಗಳನ್ನು, ಕೆಲವರು ಭೂಮಿಯನ್ನು, ಮತ್ತೆ ಕೆಲವರು ಹಣವನ್ನು ಕೊಡುವುದರ ಮೂಲಕ ನೆರವಾಗಿದ್ದಾರೆ.

ಅರಿವು ಹಲವು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನಾಗರೀಕರು ಸೇರಿ ಉತ್ತಮ ಶಿಕ್ಷಣ ಪದ್ಧತಿ ಮತ್ತು ಗೌರವ, ಸಂತೋಷ, ಹೆಮ್ಮೆಗಳಿಂದ ಕೂಡಿರುವ ಜೀವನ ಸಂಸ್ಕೃತಿಯನ್ನು ಕಂಡುಕೊಳ್ಳಲು ಮಾಡಿರುವ ಪ್ರಯತ್ನ.

ಶಾಲೆ ಪ್ರಾರಂಭವಾದದ್ದು ಸ್ನೇಹಿತರೊಬ್ಬರು ಬಿಟ್ಟು ಕೊಟ್ಟ ಭೂಮಿಯಲ್ಲಿ (2008). ಹಿತೈಷಿಗಳ ಸಹಾಯದಿಂದ ಇಂದು ಶಾಲೆಗೆ ಅದರದೇ ಆದ ಸ್ಥಳವಿದೆ. ಸುಮಾರು ೨೮೫ ಜನ ವಿದ್ಯಾರ್ಥಿಗಳಿದ್ದಾರೆ. ೨೦ ಜನ ಶಿಕ್ಷಕರು, ೧೮ ಜನ ಸಂಪನ್ಮೂಲ ವ್ಯಕ್ತಿಗಳೂ, ಸ್ವಯಂಸೇವಕರೂ ಇದ್ದಾರೆ.

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.