ನಮ್ಮ ಈ ಪ್ರಯತ್ನವನ್ನು ಪ್ರೋತ್ಸಾಹಿಸಲು ಯೋಚಿಸುತ್ತಿರುವುದಕ್ಕೆ ಧನ್ಯವಾದಗಳು. ಅರಿವು ಮೊದಲಿನಿಂದಲೂ ಸಹಭಾಗಿತ್ವದ ಪ್ರಯತ್ನವಾಗಿದೆ. ಅರಿವು ಪ್ರಾರಂಭವಾಗಿದ್ದೇ, ನಮ್ಮ ಸ್ನೇಹಿತರಾದ ಶ್ರೀ ಕೆ. ರಾಘವೇಂದ್ರ ರವರು ತಮ್ಮ ತೋಟವನ್ನು ಶಾಲೆಗಾಗಿ ಬಳಸಿಕೊಳ್ಳಲು ಅವಕಾಶ ನೀಡಿದ್ದರಿಂದ. ನಂತರ ನಮ್ಮ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರ ಸಹಕಾರದಿಂದ, ಈಗಿರುವ ಸ್ಥಳವನ್ನು ಖರೀದಿಸಲಾಯಿತು. ನಾವು ಇದೇ ರೀತಿಯ ಸಾಮುದಾಯಿಕ ಪ್ರಯತ್ನದಲ್ಲಿ ಮುಂದುವರೆಯಲು ಬಯಸುತ್ತೇವೆ. ಈ ನಿಟ್ಟಿನಲ್ಲಿ ತಮ್ಮ ಕೊಡುಗೆ , ನಮ್ಮ ಈ ಪ್ರಯತ್ನವನ್ನು ಮುಂದುವರೆಸಿಕೊಂಡು ಹೋಗುವುದಕ್ಕೆ ಪ್ರೋತ್ಸಾಹ ನೀಡುತ್ತದೆ.

ನಾವು ಸ್ವಾವಲಂಬಿಗಳಾಗುವ ಪ್ರಯತ್ನದಲ್ಲಿದ್ದೇವೆ. ಆದರೂ ನಮ್ಮ ಹೊಸ ಯೋಚನೆ ಮತ್ತು ಯೋಜನೆಗಳಿಗೆ ಸಹಾಯದ ಅಗತ್ಯವಿದೆ. ನಿಮ್ಮ ಎಲ್ಲಾ ರೀತಿಯ ಕೊಡುಗೆಗಳನ್ನು ನಾವು ಕೃತಜ್ಞತೆಯಿಂದ ಸ್ವೀಕರಿಸುತ್ತೇವೆ. ನೀವು ಹಣ ಅಥವಾ ಪುಸ್ತಕ, ಪಾಠೋಪಕರಣಗಳು, ಕಲಿಕಾ ಸಾಮಗ್ರಿಗಳ ಕೊಡುಗೆ ನೀಡಬಹುದು. ನೀವು ನಮ್ಮನ್ನು ಸಂಪರ್ಕಿಸಿದರೆ ನಮ್ಮ ಸದ್ಯದ ಅಗತ್ಯವನ್ನು ತಿಳಿಸುತ್ತೇವೆ.

ನಿಮ್ಮ ಕೊಡುಗೆಗೆ ಕೇಂದ್ರ ತೆರಿಗೆ ಇಲಾಖೆಯ ೮೦ ಜಿ , ನಿಯಮದಡಿಯಲ್ಲಿ ತೆರಿಗೆ ವಿನಾಯಿತಿಯಿದೆ.

ನಮ್ಮ ಬ್ಯಾಂಕ್ ಖಾತೆ ವಿವರಗಳು

ಖಾತೆಯ ಹೆಸರು - ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್,
ಖಾತೆ ಸಂಖ್ಯೆ - 843210110001707
ಐ. ಎಫ್. ಎಸ್. ಸಿ. ಸಂಖ್ಯೆ - BKID0008432
ಬ್ಯಾಂಕ್ ಆಪ್ ಇಂಡಿಯಾ , ಕುವೆಂಪುನಗರ ಶಾಖೆ, ಮೈಸೂರು .

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ