ನಮ್ಮ ಶಾಲೆಯು ಲಿಂಗಾಂಬುಧಿ ಪಕ್ಷಿ ಧಾಮದ ಪಕ್ಕದಲ್ಲೇ ಇರುವುದರಿಂದ, ನಮ್ಮ ಕೈಲಾದ ಮಟ್ಟಿಗೆ ಪಕ್ಷಿಧಾಮದ ಸಂರಕ್ಷಣೆಗೆ ಶ್ರಮಿಸುತ್ತೇವೆ. ಕರ್ನಾಟಕ ಅರಣ್ಯ ಇಲಾಖೆಯು ಲಿಂಗಾಂಬುಧಿ ಅರಣ್ಯವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ.

ಅರಿವು ಶಾಲೆಯ ಸಂಸ್ಥಾಪಕರೂ, ಟ್ರಸ್ಟಿಗಳೂ ಆದ ಡಾ. ಮನೋಹರ ಮತ್ತು ಬರ್ಟಿ ಒಲಿವೆರರವರು ಲಿಂಗಾಂಬುಧಿ ಅರಣ್ಯ ಸಮಿತಿಯ ಸದಸ್ಯರೂ ಆಗಿದ್ದಾರೆ. ಅರಣ್ಯ ಇಲಾಖೆಯು ಲಿಂಗಾಂಬುಧಿ ಅರಣ್ಯವನ್ನು ಸಂರಕ್ಷಿಸುವ ಉದ್ದೇಶದಿಂದ ಈ ಸಮಿತಿಯನ್ನು ರಚಿಸಿದೆ.

ಹೆಚ್ಚಿನ ವಿವರಗಳಿಗಾಗಿ ಈ ಕೊಂಡಿಯನ್ನು ಹಿಂಬಾಲಿಸಿ - http://www.mysorenature.org/lingambudhi/lingambudhi-lake-and-environ

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.