ನಾವು ಯಾವುದೇ ಒಂದು ತತ್ವಕ್ಕೆ ಅಂಟಿಕೊಂಡಿಲ್ಲ. ನಮ್ಮ ತಂಡದಲ್ಲಿ ಮಹಾತ್ಮ ಗಾಂಧಿಯವರ 'ನಯೀ ತಾಲೀಮ್ ' ನಿಂದ, ಕೆನ್ ರಾಬಿನಸನ್ ಅನುಮೋದಿಸಿದ ಮಾದರಿ ಬದಲಾವಣೆಗಳವರೆಗೂ ಅಧ್ಯಯನ ಮಾಡಿರುವವರಿದ್ದಾರೆ. ಆದರೆ ಒಂದು ಶಾಲೆಯಾಗಿ ನಾವು ಯಾವುದೇ ಸಿದ್ಧಾಂತಕ್ಕೆ ಅರ್ಪಿಸಿಕೊಂಡಿಲ್ಲ.

ಕಲಿಕೆಯನ್ನು ಒಂದು ನಲಿವಿನ ಪ್ರಕ್ರಿಯೆಯನ್ನಾಗಿ ಮಾಡುವುದೇ ಅರಿವು ಶಾಲೆಯ ಮೂಲ ಉದ್ದೇಶ. ನಮಗೆಲ್ಲರಿಗೂ ಕಲಿಯುವುದೆಂದರೆ ಖುಷಿ. ನಾವು ಕಲಿಯಲೆಂದೇ ಬದುಕುತ್ತೇವೆ. ಈ ಸರಳ ಅಂಶವೇ ನಾವು ಈ ಹಾದಿ ಆಯ್ಕೆಮಾಡಲು ಕಾರಣ.

ಮಕ್ಕಳು ಸ್ವಾಭಾವಿಕವಾಗಿಯೇ ಹೊಸ ಹೊಸ ವಿಷಯಗಳನ್ನು ತಿಳಿಯಲು ಇಷ್ಟ ಪಡುತ್ತಾರೆ. ದುರದೃಷ್ಟವಶಾತ್, ಮಕ್ಕಳ ಈ ಗುಣಕ್ಕೆ ಶಾಲೆಯಿಂದ ಮತ್ತು ಪೋಷಕರಿಂದ ಅನುಮೋದನೆ ಸಿಗುವುದಿಲ್ಲ. ಬಾಲ್ಯಾವಸ್ಥೆಯಲ್ಲಿ ತಮಗೆ ಇಷ್ಟ ಬಂದದ್ದನ್ನು ಕಲಿಯುವ ಸ್ವಾತಂತ್ರ್ಯ ಕಲ್ಪಿಸಿಕೊಡುವುದು ಬಹಳ ಮುಖ್ಯ. ಅರಿವು ಶಾಲೆಯಲ್ಲಿ ಕಲಿಕೆ ಒಂದು ಆರಾಮದಾಯಕ, ಅರ್ಥಪೂರ್ಣ ಅನುಭವವಾಗುವಂತೆ ಮಾಡಲು ಪ್ರಯತಿಸಲಾಗುತ್ತಿದೆ.

ಅರಿವು ಶಾಲೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳ ಕೇಂದ್ರ ಬಿಂದು ಪರಿಸರ ಸಂರಕ್ಷಣೆ. ನಾವು ಪರಿಸರವನ್ನು ರಕ್ಷಿಸದೇ ಬೇರೇನನ್ನೂ ರಕ್ಷಿಸುವುದು ಕಷ್ಟ ಅಥವಾ ಅಸಾಧ್ಯ.

ನಮ್ಮ ಕೆಲವು ನಂಬಿಕೆಗಳು:

  • ಕಲಿಕೆ ಒಂದು ನಲಿವಿನ ಪ್ರಕ್ರಿಯೆಯಾಗಬೇಕು.
  • ಪರಿಸರ ಸಂರಕ್ಷಣೆ ಶಿಕ್ಷಣದ ಮುಖ್ಯ ಅಂಶವಾಗಬೇಕು.
  • ಮಾಡಿ ಕಲಿಯುವುದೇ ಅತ್ತ್ಯುತ್ತಮ ಕಲಿಕಾ ವಿಧಾನ.
  • ಶಾಲೆಯು ಪ್ರಸ್ತುತ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಪ್ರಶ್ನಿಸಬೇಕು.
  • ಕಲಿಕೆ ತರಗತಿಗೆ ಸೀಮಿತವಾಗಿಲ್ಲ.
  • ಮಕ್ಕಳು ಹಲವಾರು ರೀತಿಗಳಲ್ಲಿ ಕಲಿಯುತ್ತಾರೆ. ಆದ್ದರಿಂದ ಶಾಲೆಯು ಮಕ್ಕಳನ್ನು ಕಲಿಕೆಯ ವಿವಿಧ ಮಜಲುಗಳಿಗೆ ಪರಿಚಯಿಸಬೇಕು.
  • ಒಳ್ಳೆಯ ಶಿಕ್ಷಣ ಎಲ್ಲರ ಕೈಗೆಟುಕುವಂತಿರಲು ಸಾಧ್ಯ.
  • ಸಹಕಾರಿ ತತ್ವದಲ್ಲಿ ನಂಬಿಕೆ.
  • ಮಕ್ಕಳು ಶಾಲೆಯಿಂದ ವಿಶ್ವಾಸಿ ಮತ್ತು ಸ್ವಾವಲಂಬಿ ವ್ಯಕ್ತಿಗಳಾಗಿ ಹೊರಬರಬೇಕು.

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ.