"ಅರಿವು" ನಲ್ಲಿ ಸ್ವಯಂಸೇವಕರಾಗಲು ಬಯಸಿದ್ದಕ್ಕಾಗಿ ಧನ್ಯವಾದಗಳು. ಸಮಾಜದ ವಿವಿಧ ವೃತ್ತಿಯ ಜನರು ನಮ್ಮಲ್ಲಿಗೆ ಬಂದು, ತಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ನಾವು ಸ್ವಾಗತಿಸುತ್ತೇವೆ. ನೀವು ಮೈಸೂರಲ್ಲದೆ ಬೇರೆ ಸ್ಥಳದಲ್ಲಿದ್ದರೂ ತೊಂದರೆಯಿಲ್ಲ. ನಿಮ್ಮ ಬಿಡುವಿನ ವೇಳೆಯನ್ನು ಅರ್ಥಪೂರ್ಣವಾಗಿ ನಮ್ಮ ಜೊತೆ ಇದ್ದು ಕಳೆಯಬಹುದು.

"ಅರಿವು" ನಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವುದರಿಂದ ನಿಮಗೆ ಅರ್ಥಪೂರ್ಣ ಅನುಭವವಾಗಬಹುದು. ನೀವು ಶಿಕ್ಷಣ ಕ್ಷೇತ್ರ ಮತ್ತು ಸಮಾಜದಲ್ಲಿ ನಡೆಯುತ್ತಿರುವ ಕ್ರಾಂತಿಕಾರಿ ಬದಲಾವಣೆ ತರುವ ಕೆಲಸಗಳಲ್ಲಿ ಭಾಗಿಯಾಗಬಹುದು.

  • ಬೋಧನೆ - ಎಲ್ಲಾ ವಿಷಯಗಳಲ್ಲಿ ( ಚಟುವಟಿಕೆ ಆಧಾರಿತ, ಆಟದ ಮುಖಾಂತರ, ಕಂಪ್ಯೂಟರ್ ಮತ್ತು ಇತರೆ ಸಾಮಗ್ರಿಗಳನ್ನು ಬಳಸಿಕೊಂಡು
  • ವಿನ್ಯಾಸ ಮತ್ತು ಕಲೆ ( ಅರಿವು ಶಾಲೆಯ ಆವರಣ, ವೆಬ್ಸೈಟ್ ಮತ್ತು ಮನಸ್ಸುಗಳ ಸೌಂದರ್ಯವನ್ನು ಹೆಚ್ಚಿಸಲು )
  • ಪಠ್ಯಕ್ರಮ ಮತ್ತು ವಿಷಯಗಳ ಬಗ್ಗೆ
  • ಚಟುವಟಿಕೆಗಳ ವಿನ್ಯಾಸ
  • ಪರಿಸರ
  • ಶಿಕ್ಷಕರ ಜ್ಞಾನ ಮತ್ತು ಕೌಶಲವನ್ನು ಹೆಚ್ಚಿಸಲು ಸಹಾಯ

ಇವೆಲ್ಲವೂ ಸೂಚಕಗಳು ಮಾತ್ರ.

ನಿಮ್ಮ ಯೋಚನೆ ಮತ್ತು ಕ್ಷೇತ್ರ ಮೇಲೇಳಿದ ಯಾವುದ್ದಕ್ಕೂ ಹೊಂದದ್ದಿದ್ದರೂ ಸಹ ಪರವಾಗಿಲ್ಲ.ನಮ್ಮನ್ನು ಸಂಪರ್ಕಿಸಿ. info@arivu.org

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ