"ಅರಿವು" ಜೊತೆ ಕೈ ಜೋಡಿಸಲು ಬಯಸುತ್ತಿರುವ ನಿಮಗೆ ಧನ್ಯವಾದಗಳು. ಈ ಕಾರ್ಯದಲ್ಲಿ ಆಸಕ್ತಿ ವಹಿಸಿ, ನಮ್ಮ ಬಳಗವನ್ನು ಸೇರಬಯಸುವವರನ್ನು ಸ್ವಾಗತಿಸುತ್ತೇವೆ. ನಮ್ಮ ಸದ್ಯದ ಅಗತ್ಯಗಳು ಈ ಕೆಳಗಂಡಂತಿವೆ.

ವಿಷಯ ಶಿಕ್ಷಕರು - ಮಾಧ್ಯಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಭೋದಿಸಲು

ಗಣಿತ - ವಿದ್ಯಾರ್ಹತೆ: ಬಿ.ಎಸ್ಸಿ., ಬಿ. ಎಡ್., ಅಥವಾ ಎಂ. ಎಸ್ಸಿ . ಗಣಿತ

ಸಮಾಜ ವಿಜ್ಞಾನ- ವಿದ್ಯಾರ್ಹತೆ: ಬಿ.ಎ., ಬಿ. ಎಡ್., ಅಥವಾ ಎಂ. ಎ. ಚರಿತ್ರೆ 3

ಪೂರ್ವಪ್ರಾಥಮಿಕ: ಎನ್. ಎಸ್. ಟಿ. ಅಥವಾ ಮಾಂಟೆಸರಿ ಕ್ರಮದಲ್ಲಿ ಬೋಧಿಸಲು ತರಭೇತಿ

ನಿಮಗೆ ಅನುಭವವಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಇನ್ನೂ (ಮತ್ತೂ) ಒಳ್ಳೆಯದು .

ಅರಿವು ಸಂಪನ್ಮೂಲ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು, ವಿಷಯಗಳಲ್ಲಿ ಆಸಕ್ತಿ ಮತ್ತು ಪರಿಶ್ರಮವಿರುವ ಸಂಪನ್ಮೂಲ ವ್ಯಕ್ತಿಗಳ ಅಗತ್ಯವಿದೆ.

ನೀವು, ಮೇಲೆ ಹೇಳಿದ ಯಾವುದೇ ವಿಭಾಗಕ್ಕೆ ಸೇರದಿದ್ದರೂ, ನಮ್ಮ ಜೊತೆ ಕೈ ಜೋಡಿಸಲು ಆಸಕ್ತಿಯಿದಯೇ? ಒಳ್ಳೆಯದು. ದಯಮಾಡಿ ನಮ್ಮನ್ನು ಸಂಪರ್ಕಿಸಿ ಅಥವಾ ನಮ್ಮ ಶಾಲೆಗೇ ಭೇಟಿ ನೀಡಿ. ನಮಗೆ ಆಕಸ್ಮಿಕ ಶೋಧನೆಗಳಲ್ಲಿ ನಂಬಿಕೆ ಇದೆ.
ಸಂಪರ್ಕಿಸಿ: info@arivu.org

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ