info@arivu.org
+91 94822-77872
ಕನ್ನಡ  English 

ಸಂಪನ್ಮೂಲ ಕೇಂದ್ರ

‘ಅರಿವು’ ಶಾಲೆಯು ಒಂದು ಸಮುದಾಯ ಸಂಪನ್ಮೂಲ ಕೇಂದ್ರವನ್ನು ಪ್ರಾರಂಭಿಸುತ್ತಿದೆ. ಈ ಕೇಂದ್ರವು ಮಕ್ಕಳ ಮತ್ತು ಸಮುದಾಯದ ಕಲಿಕೆಗೆ ಸಹಾಯ ಮಾಡುತ್ತದೆ. ಕೇಂದ್ರದಲ್ಲಿ ಈ ಕೆಳಕಂಡ ವಿಷಯಗಳಿಗೆ ಸಂಬಂಧಪಟ್ಟ ಸಂಪನ್ಮೂಲಗಳು ಇರುತ್ತವೆ:

೧. ಭಾಷೆ (ಕನ್ನಡ ಮತ್ತು ಇಂಗ್ಲಿಷ್)
೨. ವಿಜ್ಞಾನ
೩. ಪರಿಸರ ವಿಜ್ಞಾನ
೪. ಗಣಿತ
೫. ಸಾಮಾಜಿಕ ವಿಜ್ಞಾನ
೬. ಕಲೆ ಮತ್ತು ಸಾಹಿತ್ಯ

ಸಂಪನ್ಮೂಲ ಕೇಂದ್ರದಲ್ಲಿ ಒಂದು ತೆರೆದ ಗ್ರಂಥಾಲಯವನ್ನೂ ನಡೆಸಲಾಗುವುದು. ಬೇರೆ ಶಾಲೆಗಳ ಮಕ್ಕಳು ಮತ್ತು ಶಿಕ್ಷಕರು ಕೂಡ ಸಂಪನ್ಮೂಲ ಕೇಂದ್ರವನ್ನು ಉಪಯೋಗಿಸಿಕೊಳ್ಳಬಹುದು. ಮೈಸೂರಿನ ಸಮಸ್ತ ಜನತೆಯೂ ಈ ಕೇಂದ್ರದ ಉಪಯೋಗವನ್ನು ಪಡೆದು ಕಲಿಕೆಯ ಹೊಸ ಸಾಧ್ಯತೆಗಳನ್ನು ಹುಡುಕಬಹುದು.

ಸಂಪನ್ಮೂಲ ಕೇಂದ್ರವು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಹಲವು ಕಾರ್ಯಾಗಾರಗಳನ್ನು ನಡೆಸುತ್ತದೆ.

 


Powered by WordPress and HQ Premium Themes.
Powered By Indic IME