info@arivu.org
+91 94822-77872
ಕನ್ನಡ  English 

ವಿಶ್ವ ಪರಿಸರ ದಿನ – ೨೦೧೬

September 11, 2016 Arivu Events

ಜೂನ್ ಮೊದಲ ಭಾನುವಾರವನ್ನು ವಿಶ್ವದಾದ್ಯಂತ ಪರಿಸರ ದಿನ ಎಂದು ಆಚರಿಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಈ ಬಾರಿ, ೦೫.೦೬.೨೦೧೬ ರ ಭಾನುವಾರದಂದು ಕೆಲವು ಪೋಷಕರು ಮತ್ತು ಆಡಳಿತ ಮಂಡಳಿಯ ಸದಸ್ಯರು ಶಾಲೆಯ ಮುಂಭಾಗದ ರಸ್ತೆ ಅಂಚಿನಲ್ಲಿ ಔಪಚಾರಿಕವಾಗಿ ಸಸಿ ನೆಡುವ ಮೂಲಕ ನಡೆಸಿಕೊಟ್ಟರು.  ನಂತರ ಶಾಲಾ ಆವರಣವು ಹಸಿರಿನಿಂದ ಕಂಗೊಳಿಸಲು ಅಗತ್ಯವಾದ ಹೂ ಗಿಡಗಳನ್ನು ಮತ್ತು ಮಕ್ಕಳಿಗೆ ಕೃಷಿ ಚಟುವಟಿಕೆ ನಡೆಸಲು ಅಗತ್ಯವಾದ ಕೈತೋಟವನ್ನು ಅಭಿವೃದ್ಧಿಪಡಿಸಬೇಕೆಂದು ನಿಶ್ಚಯಿಸಲಾಯಿತು.  ದಿನಾಂಕ ೧೧.೬.೨೦೧೬ ರಂದು ಈ ಸಾಲಿನ ಪ್ರಥಮ ಪೋಷಕ-ಶಿಕ್ಷಕ ಸಭೆಯನ್ನು ಆಯೋಜಿಸಿದ್ದ ಸಂಧರ್ಭದಲ್ಲಿ ಮಕ್ಕಳಿಂದ ಸಸಿ ನೆಡಿಸುವ ಮೂಲಕ ಅವರಿಗೆ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿಕೊಡಲಾಯಿತು. ಅದೇ ಸಂಜೆ ೬.೩೦ ಕ್ಕೆ ಶ್ರೀ ಪವನ್ ರಾಮಚಂದ್ರ ರವರಿಂದ ‘ಸೋಜಿಗದ ಸಂಗತಿಗಳ ಕೆಂಜುಗ (ಕೆಂಪು ಇರುವೆ)’ ದ ಬಗೆಗೆ ವಿಶೇಷ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.  ಶಿಕ್ಷಣದಲ್ಲಿ ಸಾಹಿತ್ಯ ಅಭ್ಯಸಿಸಿ ( ಎಂ.ಎ – ಕನ್ನಡ), ವಾಣಿಜ್ಯ ವ್ಯವಹಾರವನ್ನು ವೃತ್ತಿಯಾಗಿಸಿಕೊಂಡಿರುವ ಪವನ್ ರವರು ಪ್ರವೃತ್ತಿಯಿಂದ ಮಿರ್ಮಿಕಾಲಜಿಸ್ಟ್ (ಇರುವೆ ತಜ್ಞ) ಆಗಿದ್ದಾರೆ.  ತಾವು ಕೊಂಡ ಹೊಸ ಕ್ಯಾಮರಾದಲ್ಲಿ ಆಕಸ್ಮಿಕವಾಗಿ ಮನೆಯ ಮುಂದಿರುವ ಮರದಲ್ಲಿನ ಕೆಂಜುಗವನ್ನು ಸೆರೆ ಹಿಡಿಯುವುದರೊಂದಿಗೆ ಆರಂಭವಾದ ಇರುವೆಗಳ ಒಡನಾಟ ಮೂರು ವರ್ಷಗಳ ಕಾಲ ಸತತವಾಗಿ ಅವುಗಳನ್ನು ಅಭ್ಯಸಿಸುವುದಕ್ಕೆ ಪವನ್ ರವರಿಗೆ ಪ್ರೇರಣೆಯಾಯಿತು ಎಂದು ತಿಳಿಸಿದರು.  ಪ್ರಕೃತಿಯಲ್ಲಿರುವ ಪ್ರತಿಯೊಂದು ಸಣ್ಣ ಜೀವಿಯೂ ಅದರದ್ದೇ ಆದ ಪಾತ್ರ ನಿರ್ವಹಿಸುತ್ತದೆ ಆದ್ದರಿಂದ ಮನುಷ್ಯನು ತಾನು ಬದುಕಿ ಇತರ ಜೀವಿಗಳನ್ನು ಬದುಕಲು ಬಿಡಬೇಕು. ಆದ್ದರಿಂದ ಕೆಂಜುಗಗಳ ಗೂಡನ್ನು ನಾಶಪಡಿಸಬಾರದೆಂದು ಕರೆಕೊಟ್ಟರು.

img_20160611_093330img_20160611_093256img_20160611_093158img_20160611_092153img_20160611_090134


Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Current month ye@r day *

Powered by WordPress and HQ Premium Themes.
Powered By Indic IME