ಸಂತೋಷದ ಕಲಿಕೆ
‘ಅರಿವು’ ಮೈಸೂರಿನಲ್ಲಿರುವ ಒಂದು ಪರಿಸರ ಸ್ನೇಹಿ, ಪ್ರಾಥಮಿಕ ಶಾಲೆ. ಅರಿವು ಶಾಲೆಯಲ್ಲಿ ಶಿಕ್ಷಣ, ಚಟುವಟಿಕೆ ಮತ್ತು ಸಹಕಾರ ಆಧಾರಿತವಾಗಿದ್ದು, ದಿನ ನಿತ್ಯದ ಜೀವನಕ್ಕೆ ಪ್ರಸ್ತುತವಾಗಿರುತ್ತದೆ.
2024-25 ನೇ ಸಾಲಿನ ಮಕ್ಕಳ ದಾಖಲಾತಿಗಾಗಿ ಶಾಲೆಯ ಭೇಟಿಗೆ ಅವಕಾಶ ಪ್ರಾರಂಭವಾಗಿದೆ. ಶಿಶುವಿಹಾರ ತರಗತಿಗಳಿಗೆ (Pre -KG, LKG ಮತ್ತು UKG) ಗೆ ಮಾತ್ರ ಅವಕಾಶ ಇದೆ. ಆಸಕ್ತಿ ಉಳ್ಳವರು ಜನವರಿ 10, 2024 ತಾರೀಕಿನ ಒಳಗಾಗಿ ಶಾಲೆಗೆ ನೇರವಾಗಿ ಬಂದು ಶಾಲೆಯನ್ನು ನೋಡಿ, ನಿಮ್ಮ ಮಗುವಿನ ವಿವರ ನೀಡಿ. ನಂತರದಲ್ಲಿ ಶಾಲೆಯ ಬಗ್ಗೆ ಮತ್ತು ಕಲಿಕಾ ಪದ್ಧತಿಯ ಬಗ್ಗೆ ಪರಿಚಯದ ಕಾರ್ಯಕ್ರಮ ಇರುತ್ತದೆ.
ಭೇಟಿಯ ಸಮಯ ಬೆಳಿಗ್ಗೆ 10.30 ರಿಂದ 1.30 ರ ಒಳಗೆ.