ಸಂತೋಷದ ಕಲಿಕೆ

‘ಅರಿವು’ ಮೈಸೂರಿನಲ್ಲಿರುವ ಒಂದು ಪರಿಸರ ಸ್ನೇಹಿ, ಪ್ರಾಥಮಿಕ ಶಾಲೆ. ಅರಿವು ಶಾಲೆಯಲ್ಲಿ ಶಿಕ್ಷಣ, ಚಟುವಟಿಕೆ ಮತ್ತು ಸಹಕಾರ ಆಧಾರಿತವಾಗಿದ್ದು, ದಿನ ನಿತ್ಯದ ಜೀವನಕ್ಕೆ ಪ್ರಸ್ತುತವಾಗಿರುತ್ತದೆ.

2024-25 ನೇ ಸಾಲಿನ ಮಕ್ಕಳ ದಾಖಲಾತಿಗಾಗಿ ಶಾಲೆಯ ಭೇಟಿಗೆ ಅವಕಾಶ ಪ್ರಾರಂಭವಾಗಿದೆ. ಶಿಶುವಿಹಾರ ತರಗತಿಗಳಿಗೆ (Pre -KG, LKG ಮತ್ತು UKG) ಗೆ ಮಾತ್ರ ಅವಕಾಶ ಇದೆ. ಆಸಕ್ತಿ ಉಳ್ಳವರು ಜನವರಿ 10, 2024 ತಾರೀಕಿನ ಒಳಗಾಗಿ ಶಾಲೆಗೆ ನೇರವಾಗಿ ಬಂದು ಶಾಲೆಯನ್ನು ನೋಡಿ, ನಿಮ್ಮ ಮಗುವಿನ ವಿವರ ನೀಡಿ. ನಂತರದಲ್ಲಿ ಶಾಲೆಯ ಬಗ್ಗೆ ಮತ್ತು ಕಲಿಕಾ ಪದ್ಧತಿಯ ಬಗ್ಗೆ ಪರಿಚಯದ ಕಾರ್ಯಕ್ರಮ ಇರುತ್ತದೆ. ಭೇಟಿಯ ಸಮಯ ಬೆಳಿಗ್ಗೆ 10.30 ರಿಂದ 1.30 ರ ಒಳಗೆ.

ಅರಿವು ಧ್ಯೇಯ

ಅರಿವು ಶಾಲೆಯ ಪ್ರಮುಖ ಅಂಶಗಳು.
  • ಚಟುವಟಿಕೆ ಆಧಾರಿತ ಕಲಿಕೆ.
  • ವಿಷಯಾಧಾರಿತ ಅಧ್ಯಯನ (ಅಂತರ ಶಾಸ್ತ್ರೀಯ ಮಾರ್ಗ).
  • ಸಮುದಾಯದ ಭಾಗವಹಿಸುವಿಕೆ.
  • ಪ್ರಕೃತಿಯಿಂದ ಮತ್ತು ಪ್ರಕೃತಿಯ ಬಗ್ಗೆ ಕಲಿಕೆ.
  • ಖಾದಿ ಸಮವಸ್ತ್ರ (ತಮಗಿಷ್ಟವಾದ ಬಣ್ಣದ್ದು).
  • ಯಾವುದೇ ಸಿದ್ಧಾಂತ/ತತ್ವದ ಕಡೆಗೂ ವಾಲದೆ ಕಲಿಕಾ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನೂ ಒಳಗೂಡಿಸಿಕೊಂಡಿರುವುದು.
  • ಆರೋಗ್ಯಕರ ಬದುಕು (ಶುಕ್ರವಾರ-, ಫಲಾಹಾರ, ಸಾವಯವ ಆಹಾರದ ಬಗ್ಗೆ ತಿಳುವಳಿಕೆ, ಚಾರಣ ಇತ್ಯಾದಿ ದೈಹಿಕ ಚಟುವಟಿಕೆಗಳು).
  • ಶಿಕ್ಷಣದಲ್ಲಿ 30ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳ ಸಕ್ರಿಯ ಪಾತ್ರ.
  • ಪ್ರತಿದಿನವೂ ಮೊದಲ ಅರ್ಧ ದಿನ ಪಟ್ಯ ಚಟುವಟಿಕೆಗಳಿಗೆ ಮತ್ತು ಉಳಿದರ್ಧ ದಿನ ಸಹ ಮತ್ತು ಪಟ್ಯೇತರ ಚಟುವಟಿಕೆಗಳಿಗೆ ಮೀಸಲು.(ಸಂಪನ್ಮೂಲ ವ್ಯಕ್ತಿಗಳಿಂದ).

ಅರಿವು ಸಾಕ್ಷ್ಯಚಿತ್ರ

ಅರಿವು ಶಾಲೆಯ ಪರಿಕಲ್ಪನಾ ಪಕ್ಷಿನೋಟ

ಸಂದರ್ಶನ

ಸಂದರ್ಶನದಲ್ಲಿ ಅರಿವು ಶಾಲೆಯ ಬಗ್ಗೆ ಮಾತನಾಡಿದ ಮಂತ್ರಿಗಳು